ಕುಂಬಳೆ: 14 ವರ್ಷದ ಬಾಲಕ ಚಲಾಯಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದು ಮೈಕ್ ಆಪರೇಟರ್ ಮೃತಪಟ್ಟ ಘಟನೆ ನಡೆದಿದೆ. ಅಂಗಡಿಮೊಗರು ಪೆರ್ಲಡ ನಿವಾಸಿ ಅಬ್ದುಲ್ಲ ಕುಂಞ (೬೦) ಮೃತಪಟ್ಟ ದುರ್ದೈವಿ ಯಾಗಿದ್ದಾರೆ.
ಫೆ. 14ರ ಸಂಜೆ ಕುಂಬಳೆ ಪೇಟೆಯಲ್ಲಿ ನಡೆದು ಹೋಗುತ್ತಿದ್ದ ಅಬ್ದುಲ್ಲರಿಗೆ ಬೈಕ್ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಪ್ರಯೋಜನವಾಗಿಲ್ಲ. ಇದೇ ವೇಳೆ ಬೈಕ್‌ನ ಹಿಂಬದಿ ಸೀಟಿನಲ್ಲಿದ್ದ ಹದಿನೈದರ ಹರೆಯದ ಬಾಲಕ ಕೂಡಾ ಗಾಯಗೊಂಡಿದ್ದು, ಈತನನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮೃತ ಅಬ್ದುಲ್ಲ ಅವರು ಬದಿಯಡ್ಕ ಹಾಗೂ ನೀರ್ಚಾಲ್‌ನಲ್ಲಿರುವ ಲೈಟ್ ಹಾಗೂ ಸೌಂಡ್ಸ್‌ನ ಮೈಕ್ ಆಪರೇಟರ್ ಆಗಿದ್ದರು.
ಬೈಕಿನಲ್ಲಿ ಈರ್ವರು ಆಪ್ರಾಪ್ತ ವಯಸ್ಕ ವಿದ್ಯಾರ್ಥಿಗಳಿದ್ದು ಬೈಕ್ ಚಾಲಕನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಕೂಡ ದಾಖಲಾಗಿದೆ.