ಕಾಸರಗೋಡು: ಮನೆ ಕಳ್ಳತನ, ಸುಲಿಗೆ ಸೇರಿದಂತೆ 20 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಬಂಟ್ವಾಳ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮಹಮ್ಮದ್ ಅಲಿ ಅಲಿಯಾಸ್ ಅತ್ತು (38) ಬಂಧಿತ ಆರೋಪಿ. ಬಿ.ಸಿ.ರೋಡಿನಿಂದ ಈತನನ್ನು ಬಂಧಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿದೆ.
ಕಾಸರಗೋಡು ಜಿಲ್ಲೆಯೊಂದರಲ್ಲೇ ಈತನ ವಿರುದ್ಧ 14 ಪ್ರಕರಣಗಳು ದಾಖಲಾಗಿವೆ. ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ವಯನಾಡಿನಿಂದ ಹಲವು ಪ್ರಕರಣಗಳಲ್ಲಿ ಬಂಧಿತನಾದ ಸುಹೇಲ್‌ನ ಸಹಚರ ಮಹಮ್ಮದ್ ಅಲಿ ಎಂದು ಪೊಲೀಸರು ತಿಳಿಸಿದ್ದಾರೆ.
ಮುಹಮ್ಮದ್ ಅಲಿ ವಿರುದ್ಧ ಮಂಜೇಶ್ವರ, ಕುಂಬಳ, ಬದಿಯಡ್ಕ ಮತ್ತು ನೀಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಸೇರಿದಂತೆ ಪ್ರಕರಣಗಳಿವೆ. ಕಳೆದ ತಿಂಗಳು 27 ರಂದು ಕುಂಬಳೆ ಚೇವಾರದ ಗೋಪಾಲಕೃಷ್ಣ ಭಟ್ ಜಮೀನಿಗೆ ನೀರು ಹಾಯಿಸಲು ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದು ಸರ ಎಗರಿಸಿದ ಪ್ರಕರಣದಲ್ಲಿ ಮಹಮ್ಮದ್ ಅಲಿ ಎರಡನೇ ಆರೋಪಿಯಾಗಿದ್ದಾನೆ.