Wednesday, November 6, 2024

ನಿಂತಿದ್ದ ಟೂರಿಸ್ಟ್‌ ಬಸ್ಸಿಗೆ ಕಾರು ಡಿಕ್ಕಿ – ಯುವಕ ಮೃತ್ಯು

ಕೋಝಿಕ್ಕೋಡ್: ತಡರಾತ್ರಿ ಎರಡು ಗಂಟೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ. ಮಂಗಪೋಯಿಲ್‌ನ ಮುಕ್ಕತ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಎರಂಜಿಮಾವು ನಿವಾಸಿ ಫಹಾದ್ ಸಲ್ಮಾನ್ ಮೃತಪಟ್ಟಿದ್ದಾರೆ.

ನಿಯಂತ್ರಣ ತಪ್ಪಿದ ಕಾರು ನಿಂತಿದ್ದ ಟೂರಿಸ್ಟ್ ಬಸ್ಸಿನ ಹಿಂದೆಗೆ ಬಲವಾಗಿ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಅಪಘಾತದ ತೀವ್ರತೆಯಿಂದ ಗಂಭೀರ ಗಾಯಗೊಂಡಿದ್ದ ಕಾರು ಚಾಲಕ ಫಹಾದ್ ಸಲ್ಮಾನ್ ಅವರನ್ನು ಸ್ಥಳೀಯರು ಹಾಗೂ ಪೊಲೀಸರು ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಸಲಾಗಲಿಲ್ಲ.

Related Articles

Latest Articles