ಮಂಗಳೂರು: ರಾಜ್ಯ ಸಮ್ಮೇಳದ ಪ್ರಚಾರಕ್ಕೆ ಕೋಟಿ ಚೆನ್ನಯರ ಭಾವಚಿತ್ರ ಬಳಕೆ ಮಾಡಿದ ಡಿವೈಎಫ್ಐ ವಿರುದ್ಧ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ವಾಮಪಂಥೀಯ ರಾಜಕೀಯ ಸಂಘಟನೆಯಾಗಿರುವ ಡಿ.ವೈ.ಎಫ್.ಐ. ಯವರ ರಾಜ್ಯ ಸಮ್ಮೇಳನದ ಪ್ರಚಾರ ಬ್ಯಾನರ್ ನಲ್ಲಿ ತುಳುನಾಡಿನ ಆಸ್ಥಿಕ ಬಾಂಧವರು ಭಕ್ತಿ ಶ್ರದ್ಧೆಯಿಂದ ಆರಾಧಿಸುವ ದೈವಸಂಭೂತರಾದ ಕೋಟಿ ಚೆನ್ನಯರ ಭಾವಚಿತ್ರವನ್ನು ಬಳಸುವುದರ ಮೂಲಕ ರಾಜಕೀಯ ದುರುದ್ದೇಶ ಸಾಧಿಸಲು ಹೊರಟಿರುವುದು ವೀರಪುರುಷರಿಗೆ ಮಾಡಿದ ಅಪಚಾರವಾಗಿದೆ ಎಂದು ಬಿಜೆಪಿ ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲ ಇದನ್ನು ಖಂಡಿಸುತ್ತದೆ ಎಂದು ಮಂಗಳೂರು ಮಂಡಲದ ಬಿಜೆಪಿ ಅಧ್ಯಕ್ಷ ಜಗದೀಶ್ ಆಳ್ವ, ಕುವೈತ್ತಬೈಲ್ ತಿಳಿಸಿದ್ದಾರೆ.
ಎರಡು ವರುಷಗಳ ಹಿಂದೆ ಪುತ್ತೂರಿನಲ್ಲಿ ಕೋಟಿ ಚೆನ್ನಯರ ತಾಯಿ ದೇಯಿ ಬೈದೆದಿಯ ಮೂರ್ತಿಗೆ ಮತಾಂಧನೊಬ್ಬ ಅಪಚಾರಗೈದು ಸಾಮಾಜಿಕ ಜಾಲತಾಣದಲ್ಲಿ ಪೊಟೊ ಹಾಕಿದಾಗ ಇದರ ವಿರುದ್ಧ ಹೋರಾಟ ಮಾಡಿರುವುದು ಬಿ.ಜೆ.ಪಿ. ಆ ಸಂದರ್ಭದಲ್ಲಿ ಮೌನವಾಗಿದ್ದವರು ಇವತ್ತು ತಮ್ಮ ಬೇಳೆ ಬೇಯಿಸಲು ಅಸಂಖ್ಯಾತ ಭಕ್ತರ ಭಾವನೆಗಳನ್ನು ಕೆಣಕಿಸಲು ಹೊರಟಿರುವುದನ್ನು ಬಿ.ಜೆ.ಪಿ. ಸಹಿಸುವುದಿಲ್ಲ ಎಂದು ಹೇಳಿದರು.
ಪೊಲೀಸ್ ಇಲಾಖೆ, ಸಂಬಂಧಿಸಿದ ಸ್ಥಳೀಯ ಆಡಳಿತ ಈ ಬಗ್ಗೆ ಅನಗತ್ಯ ಘರ್ಷಣೆಗೆ ಆಸ್ಪದಕ್ಕೆ ಅವಕಾಶ ನೀಡದಂತೆ ಶೀಘ್ರವಾಗಿ ಬ್ಯಾನರ್ ತೆರವು ಗೊಳಿಸಬೇಕಾಗಿ ಜಗದೀಶ್ ಆಳ್ವ, ಕುವೈತ್ತಬೈಲ್ ಆಗ್ರಹಿಸಿದರು.