Saturday, June 22, 2024

ಕೊರಗ ಭಾಷೆಯಲ್ಲಿ ಮೂಡಿಬಂದ ಮದುವೆ ಆಮಂತ್ರಣ..! ವ್ಯಾಪಕ ಪ್ರಶಂಸೆ. ಹೀಗಿದೆ ನೋಡಿ ಆಮಂತ್ರಣ

ಮಂಗಳೂರು: ದೇಸಿ ಭಾಷೆಗಳಿಗೆ ಬೆಂಬಲ ಸಿಗುತ್ತಿಲ್ಲ ಎನ್ನುವ ಕೊರಗಿನ ನಡುವೆ, ಇಲ್ಲೊಂದು ಜೋಡಿ ತಮ್ಮ ಮದುವೆ ಆಮಂತ್ರಣವನ್ನು ತಮ್ಮ ಮಾತೃಭಾಷೆಯಾದ ಕೊರಗ ಭಾಷೆಯಲ್ಲಿ ಮುದ್ರಿಸಿ ಗಮನ ಸೆಳೆದಿದ್ದಾರೆ.‌ ಸದ್ಯ ಆಮಂತ್ರಣ ಪತ್ರಿಕೆಯ ಫೋಟೊ ಸಾಮಾಜಿಕ ‌ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಂಗಳೂರಿನ ಕೋಡಿಬೆಟ್ಟುವಿನ ಅಕ್ಷತಾ ಹಾಗೂ ಬಾರ್ಕೂರಿನ ಅಮಿತ್ ಕುಮಾರ್ ಅವರ ವಿವಾಹ ನವಂಬರ್ 19ರಂದು ನಡೆಯಲಿದೆ. ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೊರಗ ಭಾಷೆಯಲ್ಲೇ ಮುದ್ರಿಸಲಾಗಿದೆ.

ಇದೀಗ ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಎಲ್ಲೆಡೆಯಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಕೊರಗ ಜನಾಂಗ ಹಾಗೂ ಕೊರಗ ಭಾಷೆ ತುಳುನಾಡಿನಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಪ್ರಸುಸ್ತ ಭಾಷೆ ಅಳಿವಿನಂಚಿನಲ್ಲಿದ್ದು, ಮಾತನಾಡುವವರ ಪ್ರಮಾಣ ಕಡಿಮೆ ಆಗುತ್ತಿದೆ. ಇದರ ನಡುವೆ ಆಮಂತ್ರಣವನ್ನು ಕೊರಗ ಭಾಷೆಯಲ್ಲಿ ಮುದ್ರಿಸಿರುವುದು, ಭಾಷಾ ಬೆಳವಣಿಗೆಗೆ ಪೂರಕ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

ಕೊರಗ ಭಾಷೆ, ಕನ್ನಡ ಲಿಪಿ: ಕನ್ನಡ ಲಿಪಿಯಲ್ಲಿ ಕೊರಗ ಭಾಷೆಯನ್ನು ಆಮಂತ್ರಣದಲ್ಲಿ ಮುದ್ರಿಸಲಾಗಿದೆ. ಓದುವಾಗ ತುಳುವಿನಂತೆಯೇ ಕಂಡರೂ, ಇದು ಕೊರಗ ಭಾಷೆ. ಈ ಆಮಂತ್ರಣವನ್ನು ಓದಿದ ಹಲವಾರು ಮಂದಿ ಆಶಾವಾದದ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿದ್ದಾರೆ.

Related Articles

Latest Articles