ಉಳ್ಳಾಲ: ಮೋದಿ ಪ್ರಮಾಣವಚನ ಹಿನ್ನಲೆ ಹಿನ್ನಲೆಯಲ್ಲಿ ಮುಡಿಪು ಸಮೀಪದ ಬೋಳಿಯಾರು ಬಳಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದು, ವಿಜಯೋತ್ಸವ ಮುಗಿಸಿ ವಾಪಸ್ಸಾಗುತ್ತಿದ್ದ ಕಾರ್ಯಕರ್ತರಿಬ್ಬರಿಗೆ ಅನ್ಯಕೋಮಿನ ತಂಡವೊಂದು ಚೂರಿಯಿಂದ ಇರಿದ ಘಟನೆ ಜೂ. 9 ರ ರಾತ್ರಿ ಸಂಭವಿಸಿದೆ.
ಬಿಜೆಪಿ ಕಾರ್ಯಕರ್ತ ಹರೀಶ್ ಅಂಚನ್ ಹಾಗೂ ನಂದನ್ ಚೂರಿ ಇರಿತಕ್ಕೆ ಒಳಗಾದವರು. ಗಾಯಾಳುಗಳಿಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೋದಿ ಪ್ರಮಾಣವಚನದ ಪ್ರಯುಕ್ತ ವಿಜಯೋತ್ಸವ ಬೋಳಿಯಾರ್ ನಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಹರೀಶ್ ಅಂಚನ್, ಹರೀಶ್ ಅವರ ಭಾವ ವಿನೋದ್ ಮತ್ತು ನಂದನ್ ಎಂಬವರು ವಿಜಯೋತ್ಸವ ಮುಗಿಸಿ ಮನೆಗೆ ಮರಳುತ್ತಿದ್ದ ಸಂದರ್ಭ ಬೋಳಿಯಾರಿನ ಸಮಾಧಾನ್ ಬಾರ್ ಮುಂಭಾಗದಲ್ಲಿ ಅನ್ಯಕೋಮಿನ ತಂಡವೊಂದು ಅಡ್ಡಗಟ್ಟಿ ಹರೀಶ್ ಮತ್ತು ನಂದನ್ ಮೇಲೆ ಹಲ್ಲೆಗೈದು ಚೂರಿಯಿಂದ ಇರಿದು ಪರಾರಿಯಾಗಿದೆ ಎಂದು ವರದಿಯಾಗಿದೆ.
ಹರೀಶ್ ಅಂಚನ್ ಗಂಭೀರ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿದ್ದಾರೆ. ಬೋಳಿಯಾರ್ ನಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ក ಬಂದೋಬಸ್ತ್ ಏರ್ಪಡಿಸಿದ್ದಾರೆ. ಸಮಾಧಾನ್ ಬಾರಿನ ಸಿಸಿಟಿವಿ ಡಿವಿಆರ್ ನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಕೊಣಾಜೆ ಠಾಣೆಗೆ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಲು ಆಗ್ರಹಿಸಿದ್ದಾರೆ.