ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನ ಜನರಲ್ ಮೆಡಿಸಿನ್ ವಿಭಾಗದ ವೈದ್ಯೆ ಉಳ್ಳೂರಿನ ಪಿಟಿ ಚಾಕೋ ನಗರದ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ.
ಮೃತರನ್ನು ವೆಲ್ಲನಾಡು ನಿವಾಸಿ ಡಾ.ಅಭಿರಾಮಿ ಬಾಲಕೃಷ್ಣನ್ (30) ಎಂದು ಗುರುತಿಸಲಾಗಿದೆ. ಬಾಲಕೃಷ್ಣನ್ ನಾಯರ್ ಮತ್ತು ರಮಾದೇವಿ ದಂಪತಿಯ ಪುತ್ರಿಯಾಗಿದ್ದು, ನಾಲ್ಕು ತಿಂಗಳ ಹಿಂದೆ ವಿವಾಹವಾಗಿತ್ತು.
ಪೋಲೀಸರ ಪ್ರಕಾರ, ಅಭಿರಾಮಿ ಊಟದ ನಂತರ ಕೋಣೆಯೊಳಗೆ ಬೀಗ ಹಾಕಿದ್ದಳು. ಆಕೆಯ ಫ್ಲಾಟ್‌ಮೇಟ್‌ಗಳು ಬಲವಂತವಾಗಿ ಬಾಗಿಲನ್ನು ತೆರೆದಾಗ, ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡುಬಂದಿದೆ. ಆಕೆಯನ್ನು ವೈದ್ಯಕೀಯ ಕಾಲೇಜಿಗೆ ಕರೆದೊಯ್ದಾಗ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪೊಲೀಸರು ಆಕೆಯ ಕೊಠಡಿಯಿಂದ ಸಿರಿಂಜ್ ಮತ್ತು ಡೆತ್ ನೋಟ್ ಅನ್ನು ವಶಪಡಿಸಿಕೊಂಡಿದ್ದಾರೆ.
ನಾಲ್ಕು ತಿಂಗಳ ಹಿಂದಷ್ಟೆ ಕೊಲ್ಲಂನ ರಾಮನ್‌ಕುಲಂಗರ ನಿವಾಸಿ ಪ್ರತೀಶ್ ರಘು ಅವರನ್ನು ವಿವಾಹವಾಗಿದ್ದರು. ವೈದ್ಯಕೀಯ ಕಾಲೇಜು ಪೊಲೀಸರು ಅಸ್ವಾಭಾವಿಕ ಮರಣಕ್ಕಾಗಿ ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.