Wednesday, December 11, 2024

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿಕೊಟ್ಟ ಕೆಎಲ್ ರಾಹುಲ್

ಸುಬ್ರಹ್ಮಣ್ಯ: ಕ್ರಿಕೆಟಿಗ ಮಂಗಳೂರು ಮೂಲದ ಕೆ.ಎಲ್.ರಾಹುಲ್ ಬುಧವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ‌. ಅಂತೆಯೇ ಸೌತಡ್ಕ ಬಯಲು ಗಣಪ, ಕೊಲ್ಲೂರು ಮೂಕಾಂಬಿಕ ದೇಗುಲಕ್ಕೆ ತೆರಳಿದ್ದರು.

ಕ್ಷೇತ್ರಕ್ಕೆ ಭೇಟಿ ನೀಡಿದ ಕೆ.ಎಲ್.ರಾಹುಲ್ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಬಳಿಕ ಹೊಸಳಿಗಮ್ಮನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ದೇವಳದ ವತಿಯಿಂದ ಕೆ.ಎಲ್.ರಾಹುಲ್ ಅವರನ್ನು ಗೌರವಿಸಲಾಯಿತು. ಸ್ನೇಹಿತರ ಜೊತೆಗೆ ಕೆ.ಎಲ್.ರಾಹುಲ್ ಕುಕ್ಕೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ದೇವಳದ ಅಧಿಕಾರಿಗಳು, ಸಿಬ್ಬಂದಿಗಳು, ದೇವಳದವರು, ಸ್ನೇಹಿತರು ಜತೆಗಿದ್ದರು. ಅಭಿಮಾನಿಗಳು ರಾಹುಲ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು.

Related Articles

Latest Articles