ಪೈವಳಿಕೆ: ತೆಂಗಿನ ಕಾಯಿ ಹೆಕ್ಕಲು ಹೋದ ವ್ಯಕ್ತಿ ನಾಗರಹಾವು ಕಡಿದು ಮೃತಪಟ್ಟ ಘಟನೆ ಕುರುಡಪದವು ಪಾರೆಕೋಡಿ ಎಂಬಲ್ಲಿ ನಡೆದಿದೆ. ಪಾರೆಕೋಡಿ ನಿವಾಸಿ ಕೃಷ್ಣಪ್ಪ ಮೂಲ್ಯ (72) ಮೃತಪಟ್ಟ ದುರ್ದೈವಿ.
ಕೂಲಿ ಕಾರ್ಮಿಕರಾಗಿರುವ ಕೃಷ್ಣಪ್ಪ ಮೂಲ್ಯ ನ. ೫ರ ಸಂಜೆ 4.30ರ ವೇಳೆ ಮನೆ ಬಳಿ ತೆಂಗಿನ ಮರದಿಂದ ಬಿದ್ದ ಕಾಯಿ ಹೆಕ್ಕಲು ಹೋಗಿದ್ದ ವೇಳೆ ನಾಗರ ಹಾವು ಕಡಿದಿದೆ ಎನ್ನಲಾಗಿದೆ.
ಕೂಡಲೇ ಅವರನ್ನು ಉಪ್ಪಳದ ಆಸ್ಪತ್ರೆಗೆ ತಲುಪಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಂಗಳೂರು ಕಂಕನಾಡಿ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ರಕ್ಷಿಸಲಾಗಲಿಲ್ಲ.