ಬಂಟ್ವಾಳ: ಪಂಜಿಕಲ್ಲು ಪರಿಸರದಲ್ಲಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಪಂಜಿಕಲ್ಲು ಗ್ರಾಮದ ಇನಿಲಕೋಡಿ ನಾರಾಯಣ ಬಂಗೇರ ಇವರ ಮನೆಯ ಅಂಗಳದಲ್ಲಿ ಸುಮಾರು ಬರೋಬ್ಬರ 12 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿತ್ತು.
ರೋಹಿಣಿ ಎಂಬವರು ತೋಟಕ್ಕೆ ಹೋಗಿ ವಾಪಾಸು ಮನೆಗೆ ಬರುವ ಸಂದರ್ಭದಲ್ಲಿ ಇವರಿಗೆ ಗೊತ್ತಿಲ್ಲದಂತೆ ಕಾಳಿಂಗ ಸರ್ಪಕ್ಕೆ ತುಳಿದಿದ್ದರು. ಆದರೆ ಕ್ಷಣಾರ್ಧದಲ್ಲಿ ಗಮನಕ್ಕೆ ಬಂದು ಅಪಾಯದಿಂದ ಪಾರಾಗಿದ್ಧಾರೆ. ಕೂಡಲೇ ಮನೆಯವರು
ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕಿರಣ್ ಅವರು ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಸಹಕಾರದಿಂದ ಕಳಿಂಗ ಸರ್ಪವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.