Tuesday, March 18, 2025

ಮೋಕೆದ ಸಿಂಗಾರಿ ಎಂದ ಕಿಲಿ ಪೌಲ್..! ತುಳುವರಿಂದ ಮೆಚ್ಚುಗೆಯ ಮಹಾಪೂರ

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಸ್ಟಾರ್ ಕಿಲಿ ಪೌಲ್ ಹಲವರಿಗೆ ಚಿರಪರಿಚಿತ. ಇವರು ಮಾಡುವ ರೀಲ್ಸ್‌ಗೆ ಭಾರತದಲ್ಲಿ ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಇದ್ದಾರೆ. ಕೀನ್ಯಾ ವ್ಯಕ್ತಿ ಕಿಲಿ ಪೌಲ್ ಭಾರತದ ಸೊಗಡಿನ ಹಾಡು, ಡೈಲಾಗ್ ಗೆ ರೀಲ್ಸ್ ಮಾಡಿ ಭಾರತೀಯರ ಪ್ರೀತಿಗೆ ಪಾತ್ರನಾಗಿದ್ದಾರೆ. ಈಗ ಮತ್ತೆ ಕಿಲಿ ಪೌಲ್ ತುಳುವರ ಮನಗೆದ್ದಿದ್ದಾರೆ.

ತಮ್ಮ ಫ್ಯಾನ್ಸ್ ಹೇಳುವ ಹಾಡಿಗೆ ರೀಲ್ಸ್ ಮಾಡುವ ಕಿಲಿ, ಫ್ಯಾನ್ಸ್ ಖುಷಿಯಾಗಿರಲಿ ಎಂದು ಬಯಸಿದ್ದಾರೆ. ಅಷ್ಟೇ ಅಲ್ಲದೇ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೂ ಕಿಲಿ ಪೌಲ್ ಕೆಲ ದಿನಗಳ ಹಿಂದೆ ರೀಲ್ಸ್ ಮಾಡಿದ್ದರು. ಅದನ್ನು ಸಾಕಷ್ಟು ಕನ್ನಡಿಗರು ಲೈಕ್ ಮಾಡಿದ್ರು. ಇಂದು ಕಿಲಿ ಕರಿಮಣಿ ಮಾಲೀಕ ಹಾಡನ್ನ ತಾವೇ ಹಾಡಿದ್ದಾರೆ.

ಅಲ್ಲದೇ ಕಿಲಿ ಈ್ ತುಳು ಹಾಡೊಂದನ್ನು ಹಾಡಿದ್ದಾರೆ. ಖ್ಯಾತ ಹಿನ್ನಲೆ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಮೋಕೆದ ಸಿಂಗಾರಿ ಹಾಡಿಗೆ ಕಿಲಿ ಲಿಂಪ್ ಸಿಂಕ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ 7.2 ಮಿಲಿಯನ್ ಫಾಲೋವರ್ಸ್ ಹೊಂದಿರುವ ಕಿಲಿ ಪೌಲ್, ಆಗಾಗ ಭಾರತಕ್ಕೆ, ದುಬೈ ಸೇರಿ ಹಲವು ರಾಷ್ಟ್ರಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇವರಿಗೆ ಪ್ರಪಂಚದ ಹಲವೆಡೆ ಅಭಿಮಾನಿಗಳು ಇದ್ದಾರೆ. ಕಳೆದ ಸಲ ರಾಮನ ಭಜನೆಗೆ ರೀಲ್ಸ್ ಮಾಡಿದ್ದ ಕಿಲಿ, ನಾನು ಕೂಡ ರಾಮಮಂದಿರಕ್ಕೆ ಭೇಟಿ ನೀಡಲು ಕಾತುರನಾಗಿದ್ದೇನೆ. ಜೈ ಶ್ರೀರಾಮ್ ಎಂದಿದ್ದರು.

Related Articles

Latest Articles