Thursday, July 18, 2024

5 ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದ ಕೇರಳದ ಇಂಜಿನಿಯರ್ ಮೃತ್ಯು; ಕೈಯಲ್ಲಿದ್ದ ಟ್ಯಾಟೂ ಮೂಲಕ‌‌ ಗುರುತು ಪತ್ತೆಹಚ್ಚಿದ ತಂದೆ

ಕುವೈತ್‌ನಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗಿದೆ. ಈಗಾಗಲೇ ೪೯ ಮಂದಿ ಅಸುನೀಗಿದ್ದಾಗಿ ಸುದ್ದಿ‌ ಮಾಧ್ಯಮಗಳು ವರದಿ ಪ್ರಕಟಿಸಿವೆ.

ಈ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ ಇನ್ನಿಬ್ಬರನ್ನು ಗುರುತಿಸಲಾಗಿದೆ. ಮಲಪ್ಪುರಂ ಪುಲಮಂತೋಲ್ ತಿರುಟ್ ಸ್ಥಳೀಯ ಎಂ.ಪಿ. ಚಂಗನಾಶ್ಶೇರಿ ಮೂಲದ ಬಾಹುಲೇಯನ್ (36) ಮತ್ತು ಶ್ರೀಹರಿ ಪ್ರದೀಪ್ (27) ಮೃತಪಟ್ಟವರು.

ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರನಾದ ಶ್ರೀಹರಿ ಜೂನ್ 5 ರಂದು ಕುವೈತ್‌ಗೆ ಕೆಲಸದ ನಿಮಿತ್ತ ಆಗಮಿಸಿದ್ದರು. ತಂದೆ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದು ಅದೇ ಕಂಪೆನಿಯಲ್ಲಿ ಶ್ರೀ ಹರಿ ಉದ್ಯೋಗಕ್ಕಾಗಿ ಹೋಗಿದ್ದು ವಾರ ಕಳೆಯುವುದರ ಒಳಗೆ ಇಂತಹ ದುರ್ಘಟನೆ ನಡೆದಿದೆ.

ಟ್ಯಾಟೂ ಮೂಲಕ ಮೃತದೇಹದ ಗುರುತು ಪತ್ತೆ.!
ಮೃತಪಟ್ಟವರ ಗುರುತು ಪತ್ತೆಗಾಗಿ ಶ್ರೀಹರಿಯ ತಂದೆಯನ್ನು ಅಧಿಕಾರಿಗಳು ಕರೆಸಿದ್ದಾರೆ. ಆ ವೇಳೆ ಸುಟ್ಟು ಕರಕಲಾಗಿದ್ದ ಮುಖದಿಂದ ತಂದೆಗೆ ಮಗನ ಗುರುತು ಪತ್ತೆ ಸಾಧ್ಯವಾಗಿಲ್ಲ. ಆದರೆ ಕೈಯಲ್ಲಿದ್ದ ಟ್ಯಾಟೂವಿನಿಂದ ಗುರುತು ಪತ್ತೆ ಸಾಧ್ಯವಾಗಿದೆ. ‌

ಮಗನನ್ನು ನಗುಮೊಗದೊಂದಿಗೆ ಕಳುಹಿಸಿಕೊಟ್ಟ ಕುಟುಂಬಕ್ಕೆ ಆಘಾತವಾಗಿದೆ. ಕನಸು ಕಟ್ಟಿಕೊಂಡು ವಿದೇಶಕ್ಕೆ ಹಾರಿದ್ದಾತ ವಿಧಿಯಾಟಕ್ಕೆ ಶವವಾಗಿ ಬರುವಂತಾಗಿದೆ. ಇದರೊಂದಿಗೆ ಸಾವನ್ನಪ್ಪಿದ ಮಲಯಾಳಿಗಳ ಸಂಖ್ಯೆ 14ಕ್ಕೆ ಏರಿದೆ.

Related Articles

Latest Articles