ಕಾಸರಗೋಡು: ಮೊಬೈಲ್ ನಲ್ಲಿ ಮಾತನಾಡುತ್ತಾ ಹಳಿ ದಾಟುತ್ತಿದ್ದ ಯುವಕ ರೈಲಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ರಾವಣೀಶ್ವರಂನ ಕೋಟಿಲಂಗಾಡ್ ಚಾಲಿಯನ್ ಪ್ರದೇಶದ ಪಲ್ಲಿಕ್ಕರ ರೈಲ್ವೆ ಮೇಲ್ಸೇತುವೆ ಬಳಿಯ ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. 33 ವರ್ಷದ ಪವರ್ ಮ್ಯಾನ್ ಕೆಲಸ ಮಾಡುತ್ತಿದ್ದ ಸುಧಾಕರನ್ ಮೃತಪಟ್ಟ ವ್ಯಕ್ತಿ .
ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಟ್ರ್ಯಾಕ್ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದಿದೆ. ಯುವಕನ ಬೈಕ್ ಅದರ ಕೀಲಿಯೊಂದಿಗೆ ರಸ್ತೆಬದಿಯಲ್ಲಿ ನಿಂತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.