ಕಾಸರಗೋಡು: ಚಲಿಸುತ್ತಿದ್ದ ರೈಲು ಹತ್ತುವಾಗ ಹಳಿ ಮೇಲೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ಕಾಸರಗೋಡು ರೈಲು ನಿಲ್ದಾಣದಲ್ಲಿ ನಡೆದಿದೆ. ಒಡಿಶಾ ಮೂಲದ ಸುಶಾಂತ್ (41) ಮೃತರು. ಇವರು ಮಂಗಳೂರು ಪೆಟ್ರೋಲ್ ಪಂಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಸುಶಾಂತ್ ಮಂಗಳೂರಿನಿಂದ ಚೆನ್ನೈಗೆ ಹೋಗುವ ರೈಲಿನಲ್ಲಿ ಬಂದಿದ್ದರು. ಕಾಸರಗೋಡಿ ನಲ್ಲಿ ನೀರು ಖರೀದಿಸಲು ಇಳಿದಿದ್ದಾರೆ. ರೈಲು ಚಲಿಸುತ್ತಿರುವುದನ್ನು ಕಂಡು ಓಡಲು ಯತ್ನಿಸಿ ರೈಲು ಹಳಿಗೆ ಬಿದ್ದು ಮೃತಪಟ್ಟಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.