ಕಾಸರಗೋಡು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯೊಬ್ಬನ ತಲೆ ವಿದ್ಯುತ್ ಕಂಬಕ್ಕೆ ತಾಗಿ ದಾರುಣ ಅಂತ್ಯ ಕಂಡಿದ್ದಾನೆ.
ಚೆಮ್ಮನಾಡು ಜಮಾತ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಹಾಗೂ ಮನ್ನಿಪಾಡಿ ಹೌಸಿಂಗ್ ಕಾಲೋನಿಯ ಸುನೀಲ್ ಕುಮಾರ್ ಅವರ ಪುತ್ರ ಮನ್ವಿತ್ (15) ಮೃತರು.
ಕರಂದಕ್ಕಾಡ್ ಎಂಬಲ್ಲಿ ಬುಧವಾರ ಸಂಜೆ ಈ ದುರ್ಘಟನೆ ನಡೆದಿದೆ. ಶಾಲೆ ಬಿಟ್ಟು ಮನೆಗೆ ತೆರಳಲು ಖಾಸಗಿ ಬಸ್‌ನಲ್ಲಿ ಮಧೂರಿಗೆ ತೆರಳುತ್ತಿದ್ದಾಗ ಕರಂದಕ್ಕಾಡ್ ಎಂಬಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ವಿದ್ಯಾರ್ಥಿಯ ತಲೆ ಬಡಿದಿದೆ. ಕೂಡಲೇ ಅವರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ರಕ್ಷಿಸಲು ಸಾಧ್ಯವಾಗಲಿಲ್ಲ.