Wednesday, February 19, 2025

ಕಾಸರಗೋಡು: ಕೆರೆಗೆ ಬಿದ್ದು ಬಾಲಕ ದಾರುಣ ಸಾವು

ಕಾಸರಗೋಡು: ಮನೆಯಿಂದ ನಾಪತ್ತೆಯಾಗಿದ್ದ ಮೂರು ವರ್ಷದ ಬಾಲಕ ಕೆರೆಗೆ ಬಿದ್ದು ಅಸುನೀಗಿದ ಘಟನೆ ವರದಿಯಾಗಿದೆ. ಬೆದ್ರಡುಕ ಕಂಬಾರ ರಹ್ಮಾನಿಯಾ ಮಂಜಿಲ್‌ನ ನೌಶಾದ್ ಮತ್ತು ಮರ್ಯಮ್ ಶನಿಫಾ ದಂಪತಿಯ ಏಕೈಕ ಪುತ್ರ ಮುಹಮ್ಮದ್ ಸೋಹನ್ ಮೃತಪಟ್ಟ ಬಾಲಕ.

ಸೆ.‌ 29ರ ಭಾನುವಾರ ಮಧ್ಯಾಹ್ನ ಮನೆಯಿಂದ ಮಗು ಕಾಣೆಯಾಗಿತ್ತು. ಮನೆಯವರು ಮತ್ತು ನೆರೆಹೊರೆಯವರು ಹುಡುಕಿದಾಗ ಕೆರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಘಟನೆ ಸಂಬಂಧ ಕಾಸರಗೋಡು ಟೌನ್ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

Related Articles

Latest Articles