Sunday, May 18, 2025

ಕಾಸರಗೋಡು: ಗೇಟ್ ಮೈಮೇಲೆ ಬಿದ್ದು ಪುಟ್ಟ ಕಂದಮ್ಮ ಮೃತ್ಯು

ಕಾಸರಗೋಡು: ಐದು ಅಡಿ ಎತ್ತರದ ಸ್ಲೈಡಿಂಗ್ ಗೇಟ್ ಬಿದ್ದು ಎರಡು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಉದ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೆ.‌18 ರ ಬುಧವಾರ ನಡೆದಿದೆ.

ಮೃತ ಕಂದಮ್ಮನನ್ನು ಉದ್ಮಾ ಪಂಚಾಯತ್‌ನ ಪಲ್ಲಂ ತೆಕ್ಕೆಕ್ಕರ ವಾರ್ಡ್‌ನ ನಿವಾಸಿ ರೈಮಾ ಮತ್ತು ಮಾಹಿನ್ ರಫಿ ದಂಪತಿಯ ಪುತ್ರ ಅಬು ತಾಹಿರ್ ಎಂದು ಗುರುತಿಸಲಾಗಿದೆ.

ಹಬ್ಬಕ್ಕೆಂದು ಮಾಂಗಾಡ್ ಎಂಬಲ್ಲಿಗೆ ಬಂದಿದ್ದ ವೇಳೆ ಬಾಲಕ ಆಟ ಆಡುತ್ತಿದ್ದ. ಈ ವೇಳೆ ಗೇಟ್ ದೇಹದ ಮೇಲೆ‌ ಬಿದ್ದಿದೆ. ಗೇಟ್‌ನ ಕ್ಲ್ಯಾಂಪ್ ಸಡಿಲಗೊಂಡು ಅವಘಢ ಸಂಭವಿಸಿದೆ.

ಅವಘಡದಿಂದ‌ ಗಂಭೀರ ಗಾಯಗೊಂಡ ಮಗುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಪ್ರಾಣಪಕ್ಷಿ ಹಾರಿಹೋಗಿದೆ.

Related Articles

Latest Articles