ಇತ್ತೀಚೆಗೆ ನಮ್ರತಾ ಹಾಗೂ ಕಾರ್ತಿಕ್ ಮದುವೆ ಆಗಿದ್ದಾರೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇವರು ಏಕಾಏಕಿ ವಿವಾಹ ಆಗಿದ್ದು ಏಕೆ ಎಂದು ಕೆಲವರು ಗೊಂದಲಕ್ಕೆ ಒಳಗಾದರೆ, ಇನ್ನೂ ಕೆಲವರು ಇದು ಸಿನಿಮಾ ಶೂಟ್ ಇರಬಹುದು ಎಂದು ಭಾವಿಸಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ.
ಬಿಗ್ ಬಾಸ್ ಮುಗಿದು ತಿಂಗಳೇ ಕಳೆದರು ಅದರ ಬಗ್ಗೆ ಆರಂಭ ಆಗಿರುವ ಚರ್ಚೆ ನಿಂತಿಲ್ಲ. ಇತ್ತೀಚೆಗೆ ಕಾರ್ತಿಕ್ ಹಾಗೂ ನಮ್ರತಾ ಮದುವೆ ಆಗಿದ್ದಾರೆ ಎನ್ನುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇವರು ಏಕಾಏಕಿ ಮದುವೆ ಆಗಿದ್ದು ಏಕೆ ಎಂದು ಕೆಲವರು ಗೊಂದಲಕ್ಕೆ ಒಳಗಾದರೆ ಇನ್ನೂ ಕೆಲವರು ಇದು ಸಿನಿಮಾ ಶೂಟ್ ಇರಬಹುದು ಎಂದು ಭಾವಿಸಿದ್ದರು. ಅಸಲಿಗೆ ಇದು ಜಾಹೀರಾತಿನ ಶೂಟಿಂಗ್. ಹೌದು, ಟಿಎ ಶರವಣ ಒಡೆತನದ ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್ ಬ್ರ್ಯಾಂಡ್ಗಾಗಿ ಕಾರ್ತಿಕ್ ಹಾಗೂ ನಮ್ರತಾ ಜಾಹೀರಾತು ಮಾಡಿದ್ದಾರೆ. ಇದರಲ್ಲಿ ಇವರು ಮದುವೆ ಆಗುವ ರೀತಿಯ ದೃಶ್ಯ ಇದೆ. ಈ ಜಾಹೀರಾತಿನಿಂದ ಸಾಕಷ್ಟು ಗೊಂದಲ ಮೂಡಿದೆ.