Sunday, October 13, 2024

28 KG ಚಿನ್ನ, 800 KG ಬೆಳ್ಳಿ: ದಿ. ಜಯಲಲಿತಾ ಚಿನ್ನಾಭರಣ ಹಿಂತಿರುಗಿಸಲು​ ದಿನಾಂಕ ನಿಗದಿ ಪಡಿಸಿದ ಕರ್ನಾಟಕ ಕೋರ್ಟ್

ದಿವಂಗತ ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ಜಪ್ತಿ ಮಾಡಲಾಗಿದ್ದ ಒಡವೆ ಹಿಂತಿರುಗಿಸಲು ಕೋರ್ಟ್ ದಿನಾಂಕ‌ ನಿಗದಿಪಡಿಸಿದೆ. ಮಾರ್ಚ್ 6 ಮತ್ತು 7 ರಂದು ಒಡವೆಗಳನ್ನು ತಮಿಳುನಾಡು ಸರ್ಕಾರಕ್ಕೆ‌ ಹಸ್ತಾಂತರ ಮಾಡಲಾಗ್ತಿದೆ.

ಒಡವೆ ಸ್ವೀಕರಿಸಲು ತಮಿಳುನಾಡಿನಿಂದ ಇಬ್ಬರು ಅಧಿಕಾರಿಗಳ ನೇಮಕ ಮಾಡಲಾಗಿದ್ದು, ತಮಿಳುನಾಡು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಐಜಿಪಿ ವಿಜಿಲೆನ್ಸ್ ಹಾಜರಿರಬೇಕೆಂದು ವಿಶೇಷ ನ್ಯಾಯಾಧೀಶ ಮೋಹನ್​​ ಸೂಚನೆ ಕೊಟ್ಟಿದ್ದಾರೆ.

ಕರ್ನಾಟಕಕ್ಕೆ ಕೊಡಬೇಕಾದ‌ 5 ಕೋಟಿ ವ್ಯಾಜ್ಯ ಶುಲ್ಕ ಇನ್ನೂ ಪಾವತಿಯಾಗಿಲ್ಲ ಅಂತ ಕೋರ್ಟ್ ಗೆ ಎಸ್ ಪಿಪಿ ಕಿರಣ್ ಜವಳಿ ಮಾಹಿತಿ ನೀಡಿದ್ದು, ಮುಂದಿನ‌ ವಿಚಾರಣೆ ಮಾರ್ಚ್​​ 6 ಕ್ಕೆ ನಿಗದಿಪಡಿಸಲಾಗಿದೆ.

ಜಯಲಲಿತಾ ವಿರುದ್ಧದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ, ಅವರ ಅತ್ತಿಗೆ ರಾಜಕುಮಾರಿ, ಸುಧಾಕರಣ್​ ಮತ್ತು ಇತರ ಆಪ್ತರು ಪರಪ್ಪನ ಅಗ್ರಗಾರ ಜೈಲಿನಲ್ಲಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಕಾರ್ಯದರ್ಶಿ ಮಾರ್ಚ್ 6 ಮತ್ತು 7 ರಂದು ಖುದ್ದು ಹಾಜರಾಗಬಹುದು ಎಂದು ಬೆಂಗಳೂರು ನ್ಯಾಯಾಲಯ ಹೇಳಿದೆ. ಅದರಂತೆಯೇ ಬೆಂಗಳೂರಿನಿಂದ 28 ಕೆ.ಜಿ ಚಿನ್ನ, ವಜ್ರಾಭರಣ, 800 ಕೆಜಿ ಬೆಳ್ಳಿ ಆಭರಣಗಳನ್ನು ಆರು ವಾಲ್ಡ್​ಗಳಲ್ಲಿ ತರಲಾಗುತ್ತಿದೆ. ಇದಕ್ಕಾಗಿ ಅಗತ್ಯದ ಭದ್ರತೆಗಳನ್ನು ಮಾಡಲು ನ್ಯಾಯಾಲಯ ಆದೇಶಿಸಿದೆ

Related Articles

Latest Articles