Sunday, October 13, 2024

ಜಾತಿಗಣತಿ ವರದಿಯಲ್ಲಿ ಜನಸಂಖ್ಯೆ ಬಹಿರಂಗ: ಪರಿಶಿಷ್ಟ ಜಾತಿ ಪ್ರಥಮ, ಎರಡನೇ ಸ್ಥಾನದಲ್ಲಿ ಮುಸ್ಲಿಂ ಸಮುದಾಯ..!

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೊಳಗೊಂಡ ಜಾತಿ ಗಣತಿ ವರದಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಸ್ವೀಕಾರ ಮಾಡಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಸಿಎಂ ಸಿದ್ದರಾಮಯ್ಯನವರಿಗೆ ವರದಿ ಹಸ್ತಾಂತರಿಸಿದ್ದಾರೆ.

ಇದೀಗ ವರದಿಯ ಕೆಲವು ಅಂಶಗಳು ಸೋರಿಕೆಯಾಗಿವೆ. ಇದರ ಅನ್ವಯ ಒಟ್ಟು 6 ಕೋಟಿ ಕನ್ನಡಿಗರಲ್ಲಿ ಯಾವ ಜಾತಿ ಹಾಗೂ ಧರ್ಮದವರು ಎಷ್ಟು ಮಂದಿ ಇದ್ದಾರೆ ಎಂಬ ಅಂಕಿ-ಸಂಖ್ಯೆಯೂ ಬಹಿರಂಗವಾಗಿದೆ ಎಂದು ಟಿವಿ9 ವರದಿ ಭಿತ್ತರಿಸಿದೆ.‌

ವರದಿಯ ಅನ್ವಯ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ ) ಸಮುದಾಯ ಅತಿ ಹೆಚ್ಚು ಜನಸಂಖ್ಯೆ (1.08 ಕೋಟಿ) ಹೊಂದಿದೆ. ಇದರೊಂದಿಗೆ ರಾಜ್ಯದ ದೊಡ್ಡ ಸಮುದಾಯಗಳಲ್ಲಿ ಪರಿಶಿಷ್ಟ ಜಾತಿ ಪ್ರಥಮ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಮುಸ್ಲಿಂ ಸಮುದಾಯ ಇದೆ. ಇನ್ನು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಒಟ್ಟು 5.98 ಕೋಟಿ ಜನ ಸಮೀಕ್ಷೆಗೆ ಒಳಪಟ್ಟಿದ್ದು, ಅವರಲ್ಲಿ 32 ಲಕ್ಷ ಜನ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಮೂಲಗಳ ಪ್ರಕಾರ, ರಾಜ್ಯದಲ್ಲಿ ದಲಿತರೇ ಹೆಚ್ಚಾಗಿದ್ದು, ಕುರುಬ ಜನಾಂಗವೇ ಅತಿ ಹಿಂದುಳಿದ ಸಮುದಾಯವಾಗಿದೆ. ರಾಜ್ಯದ ಒಟ್ಟಾರೆ ಜನಸಂಖ್ಯೆ 5.98 ಕೋಟಿ. ಈ ಪೈಕಿ ಅಹಿಂದ ವರ್ಗದವರು 3.96 ಕೋಟಿಯಷ್ಟಿದ್ದಾರೆ. ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಹಾಗೂ ಇತರರ ಸಂಖ್ಯೆ 1.87 ಕೋಟಿಯಷ್ಟಿದೆ.

ಜಾತಿವಾರು ಜನಸಂಖ್ಯೆಯ ವಿವರ
ಪರಿಶಿಷ್ಟ ಜಾತಿ(ಎಸ್’ಸಿ)- 1.08 ಕೋಟಿ ಜನಸಂಖ್ಯೆ ಹೊಂದಿದೆ.
ಮುಸ್ಲಿಂ- 70 ಲಕ್ಷ ಜನಸಂಖ್ಯೆ
ಲಿಂಗಾಯತ- 65 ಲಕ್ಷ ಜನಸಂಖ್ಯೆ
ಒಕ್ಕಲಿಗ- 60 ಲಕ್ಷ ಜನಸಂಖ್ಯೆ
ಕುರುಬರು- 45 ಲಕ್ಷ ಜನಸಂಖ್ಯೆ
ಈಡಿಗ- 15 ಲಕ್ಷ ಜನಸಂಖ್ಯೆ
ಪರಿಶಿಷ್ಟ ಪಂಗಡ (ಎಸ್‌ಟಿ)- 40.45 ಲಕ್ಷ ಜನಸಂಖ್ಯೆ
ವಿಶ್ವಕರ್ಮ- 15
ಬೆಸ್ತ- 15 ಲಕ್ಷ
ಬ್ರಾಹ್ಮಣ- 14 ಲಕ್ಷ
ಗೊಲ್ಲ (ಯಾದವ) – 10 ಲಕ್ಷ
ಮಡಿವಾಳ ಸಮಾಜ – 6
ಅರೆ ಅಲೆಮಾರಿ – 6 ಲಕ್ಷ
ಕುಂಬಾರ – 5 ಲಕ್ಷ
ಸವಿತಾ ಸಮಾಜ – 5 ಲಕ್ಷ

Related Articles

Latest Articles