Monday, December 9, 2024

ದೇಹದೊಳಗಿಟ್ಟು ಬರೋಬ್ಬರಿ ಒಂದು ಕೋಟಿ ಮೌಲ್ಯದ ಚಿನ್ನ ಸಾಗಾಟ; ಕ್ಯಾಪ್ಸೂಲ್ ರೂಪದಲ್ಲಿ ಕಳ್ಳಸಾಗಣೆ

ಕೋಝಿಕ್ಕೋಡ್: ಕರಿಪುರ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕೇರಳ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಮಾರು 1.15 ಕೋಟಿ ರೂಪಾಯಿ ಮೌಲ್ಯದ ಒಂದೂಕಾಲು ಕೆಜಿ ಚಿನ್ನವನ್ನು ಕ್ಯಾಪ್ಸೂಲ್ ರೂಪದಲ್ಲಿ ಕಳ್ಳಸಾಗಣೆ ಮಾಡಲಾಗಿತ್ತು ಎಂದು ಅಧಿಕಾರಿಗಳು‌ ತಿಳಿಸಿದ್ದಾರೆ. ಚಿನ್ನವನ್ನು ದೇಹದೊಳಗೆ ಕ್ಯಾಪ್ಸುಲ್ ಮಾಡಿ ಬಚ್ಚಿಟ್ಟು ರವಾನೆ‌ ಮಾಡುತ್ತಿದ್ದರು.

ವಿಮಾನ ನಿಲ್ದಾಣದಲ್ಲಿ ಆರೋಪಿಗಳು ಕಸ್ಟಮ್ಸ್ ಮತ್ತು ಕಂದಾಯ ಗುಪ್ತಚರ ಇಲಾಖೆಯ ಕಣ್ಣಿಗೆ ಮಣ್ಣೆರೆಚಲು ಯತ್ನಿಸಿದ್ದು, ಆದರೆ ಕೇರಳ ಪೊಲೀಸರನ್ನು ಮರುಳು ಮಾಡಲು ಸಾಧ್ಯವಾಗಲಿಲ್ಲ. ಯುಎಇಯಿಂದ ಬಂದಿದ್ದ ತಿರೂರ್ ಮೂಲದ ರಿಮ್ನಾಸ್ ಕಮರ್ ಎಂಬಾತನಿಂದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ರಿಮ್ನಾಸ್ ಕಮರ್‌ನನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಪಾಲಕ್ಕಾಡ್‌ನ ಆಲತ್ತೂರ್‌ ಮೂಲದ ರಿಮ್ಶಾದ್‌ ಎಂಬಾತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಬಂಧಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Latest Articles