ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್ ಶೂಟಿಂಗ್ ಶುರು ಮಾಡಿದ್ದಾರೆ. ಮಂಗಳೂರು, ಕುಂದಾಪುರ, ಶ್ರೀಲಂಕಾ, ಶಿವಮೊಗ್ಗ ಸುತ್ತಮುತ್ತ ಕಾಂತಾರ ಪ್ರೀಕ್ವೆಲ್ ಚಿತ್ರೀಕರಣ ಮಾಡುತ್ತಿದ್ದಾರೆ. ಇದೀಗ ಕಾಂತಾರ ಪ್ರೀಕ್ವೆಲ್ ಪ್ರೇಕ್ಷಕರಿಗೆ ಸಿಗಬೇಕಿದ್ದ ಸಪ್ರೈಸ್ ಸುದ್ದಿಯೊಂದು ಸಿಕ್ಕಿದೆ. ಅದೇ ಕಾಂತಾರ ಚಾಪ್ಟರ್1ಗೆ ನಾಯಕಿ ಆಯ್ಕೆ. ಈ ಸಿನೆಮಾದಲ್ಲಿ ಐದು ಮಂದಿ ಹೀರೋಯಿನ್ ಇದ್ದಾರೆ ಎಂಬ ಅಚ್ಚರಿಯ ಸುದ್ದಿ ಸಿಕ್ಕಿದೆ.
ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್1 ಸಿನಿಮಾದಲ್ಲಿ ಬೇರೆಯದ್ದೇ ಪ್ಲ್ಯಾನ್ ಮಾಡಿದ್ದಾರೆ. ಕಾಂತಾರದಲ್ಲಿ ಸಿಂಗಾರ ಸಿರಿಯಾಗಿ ಸಪ್ತಮಿಗೌಡರನ್ನ ತಂದಿದ್ದರು ರಿಷಭ್. ಈ ಭಾರಿ ಐದು ಜನ ಹೀರೋಯಿನ್ಸ್ ಅನ್ನ ಕಾಂತಾರ ಚಾಪ್ಟರ್1ನಲ್ಲಿ ತರುತ್ತಿದ್ದಾರೆ. ಆ ಐದು ಜನ ನಟಿಯ ಆಯ್ಕೆ ಕೂಡ ಆಗಿದೆಯಂತೆ.
ಇತ್ತೀಚೆಗಷ್ಟೆ ಕಾಂತಾರಕ್ಕಾಗಿ ಕಲಾವಿದರ ಆಯ್ಕೆಗೆ ಆಡಿಷನ್ ಕರೆದಿದ್ದರು ರಿಷಬ್ ಶೆಟ್ಟಿ. ನಿಮಗೆ ಕಾಂತಾರ ಪ್ರೀಕ್ವೆಲ್‌ನಲ್ಲಿ ನಟಿಸೋ ಆಸೆ ಇದ್ಯಾ.? ರಿಷಬ್ ಶೆಟ್ಟಿ ಮಾಡೋ ಎಕ್ಸಾಂನಲ್ಲಿ ಪಾಸ್ ಆದ್ರೆ ಆ ಚಾನ್ಸ್ ನಿಮ್ಮದೇ ಹೇಳಿದ್ರು. ಇದನ್ನ ನೋಡಿ ಸೌತ್‌ನ ಹಾಟ್ ಬ್ಯೂಟಿ ಸ್ಯಾಂಡಲ್‌ವುಡ್‌ನ ಹಬಿಬಿ ಪಾಯಲ್ ರಜಪೂತ್, ನಟಿ ಕಾರುಣ್ಯಾ ರಾಮ್ ಸೇರಿದಂತೆ ಹಲವು ಹೀರೋಯಿನ್ಸ್ ರಿಷಬ್ ಶೆಟ್ಟಿಗೆ ಬೇಡಿಕೆ ಇಟ್ಟಿದ್ರು.
ಆದ್ರೆ ಈಗ ಒಬ್ಬರು ಹೀರೋಯಿನ್ ಹೆಸ್ರು ರಿವಿಲ್ ಆಗಿದೆ. ಅವರೇ ರುಕ್ಮಿಣಿ ವಸಂತಾ. ರುಕ್ಮಿಣಿ ವಸಂತಾ ಸಧ್ಯ ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡಿಂಗ್‌ನಲ್ಲಿರೋ ಹೀರೋಯಿನ್. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ಸ್ಕ್ರೀನ್ ಶೇರ್ ಮಾಡಿ ಸ್ಯಾಂಡಲ್‌ವುಡ್ ಕ್ರಶ್ ಆಗಿದ್ರು. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಈ ಪ್ರಿಯಾ ಈಗ ಕಾಂತಾರ ಚಾಪ್ಟರ್1 ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ.
ಕಾಂತಾರ ಪ್ರೀಕ್ವೆಲ್‌ನಲ್ಲಿರಲಿದ್ದಾರೆ ಐದು ಹೀರೋಯಿನ್..
ಹೌದು ಈಗಾಗಲೇ ಚಿತ್ರೀಕರಣ ಆರಂಭಿಸಿರುವ ಹೊಂಬಾಳೆ ಪ್ರೊಡಕ್ಷನ್ ತಂಡ ರುಕ್ಮಿಣಿ ವಸಂತ್ ಬಿಟ್ಟು ಉಳಿದ ನಾಲ್ವರು ನಾಯಕಿರ ಹುಟುಕಾಟ ನಡೆಸಿದೆ. ಸಾಯಿ ಪಲ್ಲವಿ, ಆಲಿಯಾ ಭಟ್, ಸಪ್ತಮಿ ಗೌಡ ಕೂಡ ಈ ಲಿಸ್ಟ್‌ನಲ್ಲಿ ಇರಲಿದ್ದಾರಂತೆ.
ಇನ್ನು ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ ಕೂಡ ಕಾಂತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುವುದು ಹಲವರ ಅಭಿಪ್ರಾಯ. ಶೆಟ್ರೊಂದಿಗೆ ಇರುವ ಫೋಟೋವನ್ನು ಇನ್ಸ್ಟಾ ದಲ್ಲಿ ಅಪ್ಲೋಡ್ ಮಾಡಿ, ಕಾಂತಾರ ೨ ಲೋಡಿಂಗ್ ಎಂದು ಬರೆದುಕೊಂಡಿದ್ದಾರೆ.