Wednesday, November 6, 2024

ಕಣ್ಣೂರು: ಜಿಮ್ ಸೆಂಟರ್‌ನಲ್ಲಿ ಲೈಂಗಿಕ ಕಿರುಕುಳ ಆರೋಪ; ಕಾಂಗ್ರೆಸ್‌ ನಾಯಕನ ಪುತ್ರನ ಬಂಧನ

ಕಣ್ಣೂರು: ಜಿಮ್‌ ಸೆಂಟರ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನ ಮೇಲೆ ಫಿಟ್ನೆಸ್ ಸೆಂಟರ್ ಮಾಲೀಕನನ್ನು ಬಂಧಿಸಲಾಗಿದೆ. ಪಯ್ಯನ್ನೂರು ಹಳೆ ಬಸ್ ನಿಲ್ದಾಣದ ಬಳಿ ಕಾರ್ಯಾಚರಿಸುತ್ತಿರುವ ಜಿಮ್‌ನ ಮಾಲೀಕ ಶರತ್ ನಂಬಿಯಾರ್ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ.

ಫಿಸಿಯೋಥೆರಪಿಗೆಂದು ಬಂದಿದ್ದ ಸಮಯದಲ್ಲಿ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಈ ಬಗ್ಗೆ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ 42 ವರ್ಷದ ಶರತ್ ನಂಬಿಯಾರ್​ನನ್ನು ಪಯ್ಯನೂರು ಪೊಲೀಸರು ಬಂಧಿಸಿದ್ದಾರೆ.

ವರದಿಗಳ ಪ್ರಕಾರ, ಕ್ಷೇಮ ಕೇಂದ್ರ ಮತ್ತು ಜಿಮ್‌ನ ಮಾಲೀಕ ಶರತ್ ಚಿಕಿತ್ಸಾ ಕೊಠಡಿಯನ್ನು ಒಳಗಿನಿಂದ ಲಾಕ್ ಮಾಡಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಸ್ವತಃ ಫಿಸಿಯೋಥೆರಪಿಸ್ಟ್ ಅಲ್ಲದಿದ್ದರೂ, ಮಹಿಳೆಯರಿಗೆ ತಾನೇ ಫಿಸಿಯೋಥೆರಪಿ ಮಾಡುತ್ತೇನೆ ಎಂದು ಆತ ಮುಂದೆ ಹೋಗುತ್ತಿದ್ದ ಎಂದು ಆರೋಪಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ದೂರು ಸ್ವೀಕರಿಸಿದ ಅಧಿಕಾರಿಗಳು ಸೋಮವಾರ ರಾತ್ರಿ ಶರತ್‌ನನ್ನು ಬಂಧಿಸಿದ್ದಾರೆ. ಆತನನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನಂತರ ಕಸ್ಟಡಿಗೆ ನೀಡಲಾಗಿದೆ ಎಂದು ಮಾತೃಭೂಮಿ ವರದಿ ಮಾಡಿದೆ.

ಇದರ ನಡುವೆ, ವ್ಯಕ್ತಿಗಳ ಗುಂಪು ಜು. ೨ರ ಮಧ್ಯಾಹ್ನ ಶರತ್ ಅವರ ಕ್ಲಿನಿಕ್ ಆವರಣದ ಮೇಲೆ ದಾಳಿ ಮಾಡಿ, ಉಪಕರಣಗಳನ್ನು ಧ್ವಂಸಗೊಳಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ ನಂತರ ಹಿಂಸಾಚಾರ ಸಂಭವಿಸಿದೆ ಎಂದು ವರದಿಯಾಗಿದೆ. ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿದ್ದ ಐವರನ್ನು ಪೊಲೀಸರು ತಕ್ಷಣ ಬಂಧಿಸಿದ್ದಾರೆ.

Related Articles

Latest Articles