Monday, September 16, 2024

ಕಣ್ಣೂರು: ಭೀಕರ ರಸ್ತೆ ಅಪಘಾತ – ಐವರು ಮೃತ್ಯು

ಕಣ್ಣೂರು: ಕಾರು – ಲಾರಿ ಅಪಘಾತ ಸಂಭವಿಸಿ ಪುಟ್ಟ ಕಂದಮ್ಮ ಸೇರಿದಂತೆ ಐವರು ಸಾವನ್ನಪ್ಪಿದ ಘಟನೆ ನಡೆದಿದೆ. ಚೆರುಕುಂದ್ ಪುನ್ನಚ್ಚೇರಿಯಲ್ಲಿ ಅಪಘಾತ ಸಂಭವಿಸಿದೆ. ಕಾಸರಗೋಡು ಮೂಲದ ಐವರು ಸಾವನ್ನಪ್ಪಿದ ದುರ್ದೈವಿಗಳು. ಸುಧಾಕರನ್ (49), ಕೆ.ಎನ್.ಪದ್ಮಕುಮಾರ್ (59) ಮೃತಪಟ್ಟವರೆಂದು ಮಲಯಾಳಂ ಸುದ್ದಿ ವಾಹಿನಿ ಮಾತೃಭೂಮಿ ವರದಿ ಪ್ರಕಟಿಸಿದೆ.

ಪುನ್ನಚ್ಚೇರಿ ಪೆಟ್ರೋಲ್ ಪಂಪ್ ಸಮೀಪದಲ್ಲಿ ಅಪಘಾತ ಸಂಭವಿಸಿದೆ. ಕಣ್ಣೂರು ಭಾಗಕ್ಕೆ ಗ್ಯಾಸ್ ಸಿಲಿಂಡರ್ ಏರಿಸಿ ಹೋಗುತ್ತಿದ್ದ ಲಾರಿ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ನಾಲ್ಕು ಮಂದಿ ಘಟನೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಗು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದೆ. ಮೃತಪಟ್ಟವರಲ್ಲಿ ಮೂವರು ಪುರುಷರು, ಒಂದು ಮಹಿಳೆ, ಮಗು ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

Related Articles

Latest Articles