Monday, October 14, 2024

ಚುನಾವಣೆಯಲ್ಲಿ ಸ್ಪರ್ಧೆಯ ಕುರಿತು ಮಹತ್ವದ ಹೇಳಿಕೆ ಕೊಟ್ಟ ಬಾಲಿವುಡ್ ನಟಿ ಕಂಗನಾ..!!

ಬಾಲಿವುಡ್ ನಟಿ ಕಂಗನಾ ರಣಾವತ್ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದಾರೆ. ಶ್ರೀಕೃಷ್ಣ ಆಶೀರ್ವಾದ ಮಾಡಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಇಂದು ಬೆಳಗ್ಗೆ ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಅವರು ಬಂದಿದ್ದರು.

ನೀವು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂದು ಸುದ್ದಿಗಾರರು ಕೇಳಿದಾಗ, “ಶ್ರೀ ಕೃಷ್ಣ ಕಿ ಕೃಪಾ ರಹೀ ತೊ ಲಡೆಂಗೆ (ಶ್ರೀಕೃಷ್ಣ ಆಶೀರ್ವಾದ ಮಾಡಿದರೆ ನಾನು ಹೋರಾಡುತ್ತೇನೆ)” ಎಂದು ಕಂಗನಾ ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

“600 ವರ್ಷಗಳ ಹೋರಾಟದ ನಂತರ” ಅಯೋಧ್ಯೆಯಲ್ಲಿ ಭಗವಾನ್ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರವನ್ನು ಅವರು ಶ್ಲಾಘಿಸಿದರು. “ಬಿಜೆಪಿ ಸರ್ಕಾರದ ಪ್ರಯತ್ನದಿಂದ, 600 ವರ್ಷಗಳ ಹೋರಾಟದ ನಂತರ ಭಾರತೀಯರಾದ ನಾವು ಈ ದಿನವನ್ನು ನೋಡುತ್ತೇವೆ. ನಾವು ಅತ್ಯಂತ ಸಂಭ್ರಮದಿಂದ ದೇವಾಲಯವನ್ನು ಸ್ಥಾಪಿಸುತ್ತೇವೆ. ಸನಾತನ ಧರ್ಮದ ಧ್ವಜವು ಪ್ರಪಂಚದಾದ್ಯಂತ ಹಾರಬೇಕು,” ಎಂದು ನಟಿ ಕಂಗನಾ ಹೇಳಿದರು.

Related Articles

Latest Articles