Saturday, January 25, 2025

ಕೇರಳ: ಚ‌ರ್ಚ್‌ನಲ್ಲಿ ಭೀಕರ ಬಾಂಬ್ ಸ್ಪೋಟ ಪ್ರಕರಣ: ಓರ್ವನ ಬಂಧನ

ತ್ರಿಶೂರ್: ಕಲಮಸ್ಸೆರಿ ಚರ್ಚ್‌ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಪ್ರಗತಿಯಲ್ಲಿರುವಾಗಲೇ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಬಾಂಬ್ ಇಟ್ಟಿದ್ದು ನಾನೇ ಎಂದು ಪೊಲೀಸ್ ಠಾಣೆಗೆ ಬಂದಿದ್ದಾನೆ. ತ್ರಿಶೂರ್ ಕೊಡಕರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಇವರು ಕೊಚ್ಚಿಯ ಮೂಲದವನಾಗಿದ್ದು ಪೊಲೀಸರು ಆತನನ್ನು ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದಾರೆ.

ಮಧ್ಯಾಹ್ನ ಒಂದೂವರೆ ಗಂಟೆಗೆ ಠಾಣೆಗೆ ಬಂದು ಶರಣಾಗಿದ್ದಾನೆ. ಡೊಮಿನಿಕ್ ಮಾರ್ಟಿನ್ ಶರಣಾಗಿದ್ದಾನೆ ಎಂದು ಎಡಿಜಿಪಿ ತಿಳಿಸಿದ್ದಾರೆ. ಅವನು ಅದೇ ಚರ್ಚ್‌ನ ಸದಸ್ಯ. ಆತನನ್ನು ಕೂಲಂಕಷವಾಗಿ ವಿಚಾರಣೆ ನಡೆಸಲಾಗುತ್ತಿದ್ದು, ಸ್ಫೋಟದ ಪುರಾವೆಯಾಗಿ ಕೆಲವು ಸಂಗತಿಗಳನ್ನು ತೋರಿಸಲಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.

ಇದೇ ವೇಳೆ ಕಣ್ಣೂರು ರೈಲು ನಿಲ್ದಾಣದಿಂದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿರುವ ಮಾಹಿತಿಯೂ ಹೊರಬೀಳುತ್ತಿದೆ. ಪೊಲೀಸರು ಮತ್ತು ಆರ್‌ಪಿಎಫ್ ಜಂಟಿಯಾಗಿ ನಡೆಸಿದ ಶೋಧದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ. ಅನುಮಾನದ ಮೇಲೆ ಹೊರ ರಾಜ್ಯದ ಒಬ್ಬಾತನನ್ನು ಬಂಧಿಸಲಾಗಿತ್ತು.

ಯೆಹೋವನ ಸಾಕ್ಷಿಗಳ ಸಮಾವೇಶ ನಡೆಯುವ ಸ್ಥಳದಲ್ಲಿ ಇಂದು ಬೆಳಗ್ಗೆ 9.45ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ವೇಳೆ ಸುಮಾರು 2500 ಮಂದಿ ಸಮಾವೇಶ ಕೇಂದ್ರದಲ್ಲಿದ್ದರು. ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. 36 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಏಳು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಇನ್ನೂ ಮೂವರ ಸ್ಥಿತಿ ಚಿಂತಾಜನಕವಾಗಿದೆ.

Related Articles

Latest Articles