Tuesday, January 21, 2025

60 ಮಂದಿ ಕುಳಿತು ಪ್ರಯಾಣಿಸಬಹುದಾದ ಬಸ್ ನಲ್ಲಿ 150 ಜನ – ಬಸ್ ಓಡಿಸುವುದಿಲ್ಲ ಎಂದ ಡ್ರೈವರ್.!!

ಕಡಬದಿಂದ ಪುತ್ತೂರಿಗೆ ತೆರಳುವ ಕೆಎಸ್‌ಆರ್ ಟಿಸಿ ಬಸ್ ಹತ್ತಿದ ಜನರನ್ನು ನೋಡಿ ಹೆದರಿದ ಬಸ್ ಡ್ರೈವರ್ ಬಸ್ ಓಡಿಸಲು ನಿರಾಕರಿಸಿದ ಘಟನೆ ನಡೆದಿದೆ.

ಕಡಬ ಭಾಗದಿಂದ ಶಾಂತಿಮುಗೇರು ಮಾರ್ಗವಾಗಿ ಪುತ್ತೂರಿಗೆ ಬೆಳಗ್ಗಿನ ಸಮಯ ಇದ್ದ ಒಂದು ಬಸ್ಸನ್ನು ಇತ್ತೀಚೆಗೆ ನಿಲ್ಲಿಸಲಾಗಿತ್ತು.

With input from The Mangalore Mirror

ಇದರಿಂದಾಗಿ ಬೆಳಗ್ಗಿನ ಆರಂಭದ ಬಸ್ಸು ಓವರ್ ಲೋಡ್ ಇತ್ತೀಚೆಗೆ ಅದರ ಟಯರ್ ಬ್ಲಾಸ್ಟ್ ಆಗಿದ ಘಟನೆ ನಡೆದಿತ್ತು, ಜನರು ಹೆಚ್ಚುವರಿ ಬಸ್ ಹಾಕಿ ಎಂದು ಹೇಳಿದರೂ ಅಧಿಕಾರಿಗಳು ಮಾತ್ರ ಕೇಳಿಸಿಕೊಳ್ಳದೇ ಸೈಲೆಂಟ್ ಆಗಿದ್ದಾರೆ. ಕಡಬದಿಂದ ಶಾಂತಿಮುಗೇರು ಮಾರ್ಗವಾಗಿ 7.30 ಕ್ಕೆ ಬಸ್ಸು ಹೊರಟರೆ ಮತ್ತೆ 8.40 ರ ನಂತರವೇ ಕಡಬದಿಂದ ಈ ಮಾರ್ಗವಾಗಿ ಓಡುವ ಬಸ್ಸು ಸಿಗೋದು. ಪರಿಣಾಮ 7.30 ಕ್ಕೆ ಕಡಬದಿಂದ ಹೊರಡುವ ಬಸ್ಸು ಆಲಂಕಾರು ಮುಟ್ಟುವಾಗಲೇ ತುಂಬಿ ತುಳುಕುತ್ತದೆ.

ಬಸ್ಸಲ್ಲಿ ನೂರೈವತ್ತಕ್ಕಿಂತಲೂ ಹೆಚ್ಚು ಪ್ರಯಾಣಿಕರು ಉಸಿರುಗಟ್ಟಿಕೊಂಡು ಪ್ರಯಾಣಿಸುತ್ತಾರೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಿವಿಧ ಸರಕಾರಿ ಉದ್ಯೋಗದಲ್ಲಿರುವವರು ಹಾಗೂ ಪುತ್ತೂರಿಗೆ ಅಗತ್ಯ ಕೆಲಸಗಳಿಗೆ ಹೋಗುವ ಪ್ರಯಾಣಿಕರು ಕೂಡ ಇದೇ ಬಸ್ ನಲ್ಲಿ ಪ್ರಯಾಣಿಸುತ್ತಾರೆ.

ಈ ನಡುವೆ ಇತ್ತೀಚೆಗೆ ಅದೆ ಬಸ್ ಓವರ್ ಲೋಡ್ ಪರಿಣಾಮ ಕಳೆದ ವಾರವಷ್ಟೆ ಇದೇ ಬೆಳಗ್ಗಿನ ಪ್ರಥಮ ಬಸ್ಸು ಶಾಂತಿಮುಗೇರು ಸಮೀಪದ ಕುದ್ಮಾರಿನಲ್ಲಿ ಬಸ್ಸಿನ ಚಕ್ರ ಒಡೆದುಹೊಗಿ ನಿಲುಗಡೆಯಾಗಿತ್ತು. ಅದೃಷ್ಠವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಶುಕ್ರವಾರ ಬೆಳಿಗ್ಗೆ ಇದೇ ಸಮಯದ ಬಸ್ಸು ಆಲಂಕಾರು ಮುಟ್ಟುವಾಗಲೇ ನೂರಾ ಮುವತ್ತು ಪ್ರಯಾಣಿಕರು ಬಸ್ಸೇರಿದ್ದರು. ವಿಶೇಷವೆಂದರೆ ಕಳೆದ ವಾರ ಕುದ್ಮಾರಿನಲ್ಲಿ ಬಸ್ಸಿನ ಚಕ್ರ ಒಡೆದು ಹೋಗುವ ಸಂದರ್ಭದಲ್ಲಿ ಇದ್ದ ಚಾಲಕನೇ ಶುಕ್ರವಾರ ಕೂಡಾ ಕರ್ತವ್ಯದಲ್ಲಿದ್ದರು. ಮೊದಲೇ ಭಯದಿಂದ ಇದ್ದ ಚಾಲಕನಿಗೆ. ಬಸ್ಸಿನಲ್ಲಿ ಜನ ಜಾತ್ರೆ ನೋಡಿ ಬೆವರಿಳಿದಿದೆ. ಬಸ್ಸಿನ ಚಕ್ರ ದುರ್ಬಲವಾಗಿದೆ ನಾನು ಇನ್ನು ಮುಂದೆ ಬಸ್ಸು ಚಲಾಯಿಸಲಾರೆ.

ಕಳೆದ ವಾರ ಕೂಡಾ ಚಕ್ರ ದುರ್ಬಲವಾಗಿರುವಾಗಲೇ ಪ್ರಯಾಣಿಕರು ತುಂಬಿ ಓವರ್ ಲೋಡ್ ಆಗಿ ಟಯರ್ ಬ್ಲಾಸ್ ಆಗಿದೆ , ಇದರಿಂದಾಗಿ ಇಲಾಖೆ ನನಗೆ 5000 ರೂ ದಂಢ ಬೇರೆ ವಿಧಿಸಿದೆ. ಇವತ್ತೂ ಕೂಡಾ ಅಪಾಯ ಸಂಭವಿಸಬಹುದು ಎಂದು ತನ್ನ ಅಸಾಯಕತೆಯನ್ನು ತೋಡಿಕೊಂಡರು. ಪ್ರಯಾಣಿಕರು ಎಷ್ಟೇ ಮನವಿ ಮಾಡಿದರೂ ಚಾಲಕ ಪಟ್ಟು ಬಿಡದೆ ಸುಮಾರು ಅರ್ಧಗಂಟೆ ಬಸ್ಸು ಮುಂದಕ್ಕೆ ಚಲಾಯಿಸದೆ ಆಲಂಕಾರಿನಲ್ಲೇ ಬಾಕಿಯಾಯಿತು. ಬಳಿಕ ಪ್ರಯಾಣಿಕರೋರ್ವರು ಪುತ್ತೂರು ಡಿಪೋಗೆ ಕರೆ ಮಾಡಿ ಅಧಿಕಾರಿಗಳಿಗೆ ವಿಷಯ ತಿಳಿಸಿದ ಬಳಿಕ ಅಧಿಕಾರಿಗಳ ಸೂಚನೆಯಂತೆ ಬಸ್ಸನ್ನು ಪ್ರಯಾಸದಿಂದ ಚಲಾಯಿಸಲಾಯಿತು.

ಇಷ್ಟೆಲ್ಲಾ ರಾದ್ಧಾಂತಗಳಿಗೆ ಬೆಳಿಗ್ಗೆ 7.40 ಕ್ಕೆ ಕಡಬದಿಂದ ಶಾಂತಿಮುಗೇರು ಮಾರ್ಗವಾಗಿ ಹೋಗುವ ಬಸ್ಸಿನ ಸೇವೆಯನ್ನು ಕಡಿತಗೊಳಿಸಿರುವುದು. ಹಿಂದೆ ಈ ಸಮಯಕ್ಕೆ ಬಸ್ಸು ಸೇವೆ ಇದ್ದಾಗ ಜನ ಆರಾಮವಾಗಿ ಉಸಿರುವ ಬಿಟ್ಟು ಓಡಾಡುತ್ತಿದ್ದರು.

ಇದೇ ಸಮಯಕ್ಕೆ ಮತ್ತೆ ಬಸ್ಸು ಓಡಿಸಬೇಕು ಎಂದು ಹಲವು ಮನವಿ ಸಲ್ಲಿಸಲಾಗಿತ್ತು. ಇತ್ತೀಚೆಗೆ ಪುತ್ತೂರು ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಬಸ್ಸು ವ್ಯವಸ್ಥೆ ಮಾಡಲಾಗಿದೆ ಎಂದು ಸಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು ಅಸಲಿಗೆ ಆ ಬಸ್ಸು ಇನ್ನೂ ಓಡಾಟ ಪ್ರಾರಂಭಿಸಿಲ್ಲ. ತಕ್ಷಣ ಆ ಬಸ್ಸು ಓಡಾಟ ಆರಂಭಿಸಿ ಜನರ ಪ್ರಾಣದಲ್ಲಿ ಚಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂದು ಸಾರ್ವಜನಿಕರು ಅಗ್ರಹಿಸುತ್ತಿದ್ದಾರೆ.

Related Articles

Latest Articles