ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ನಡೆಸಿದ 2023 ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಕೆ-ಟಿಇಟಿ) ಫಲಿತಾಂಶ ಪ್ರಕಟಿಸಲಾಗಿದೆ.
ಪತ್ರಿಕೆ 1 ಮತ್ತು ಪತ್ರಿಕೆ 2ಕ್ಕೆ ಹಾಜರಾದ ಒಟ್ಟು 3,01,962 ಅಭ್ಯರ್ಥಿಗಳಲ್ಲಿ 64,830 ಮಂದಿ ಅರ್ಹತೆ ಪಡೆದುಕೊಂಡಿದ್ದಾರೆ.
ಈ ಅಭ್ಯರ್ಥಿಗಳು ಸರ್ಕಾರ ಶಿಕ್ಷಕರ ನೇಮಕಾತಿಗೆ ಮುಂದೆ ನಡೆಸಲಿರುವ ಸಿಇಟಿಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಒಂದರಿಂದ ಐದನೇ ತರಗತಿವರೆಗೆ ಬೋಧನಾ ಅರ್ಹತೆಗೆ ನಡೆಸಲಾದ ಪರೀಕ್ಷೆಗೆ ಹಾಜರಾಗಿದ್ದ 1,27,131 ಮಂದಿಯಲ್ಲಿ 14,922 ಜನ ಉತ್ತೀರ್ಣರಾಗಿದ್ದಾರೆ.
ಫಲಿತಾಂಶವನ್ನು ಶಾಲಾ ಶಿಕ್ಷಣ ಇಲಾಖೆಯ https://school education.karnataka.gov.in ವೆಬ್ಸೈಟ್ ನಲ್ಲಿ ಗಮನಿಸಬಹುದಾಗಿದೆ.