ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭ ಜುಲೈ 12 ರಂದು ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಅಂಬಾನಿ ಫ್ಯಾಮಿಲಿಯಲ್ಲಿ ಸಡಗರ ಮುಗಿಲು ಮುಟ್ಟಿದೆ. ಕಿರಿಯ ಪುತ್ರನ ಮದುವೆಗೆ ಕೋಟಿ ಕೋಟಿ ರೂಪಾಯಿಗಳನ್ನ ಸುರಿಯುತ್ತಿದ್ದಾರೆ ಮುಖೇಶ್ ಅಂಬಾನಿ. ಈ ಅದ್ಧೂರಿ ಕಾರ್ಯಕ್ರಮಕ್ಕೆ ಕೆನಾಡದ ಸಿಂಗರ್ ಜಸ್ಟಿನ್ ಬೈಬರ್ ಆಗಮಿಸಲಿದ್ದಾರೆ. ಇವರು ಎಷ್ಟು ಕೋಟಿ ದುಡ್ಡು ಕೊಟ್ಟಿದ್ದಾರೆ ಎಂಬುದು ಕೇಳಿದ್ರೆ ಶಾಕ್ ಆಗುತ್ತೀರಿ.
ಕೆನಾಡದ ಸಿಂಗರ್ ಜಸ್ಟಿನ್ ಬೈಬರ್ ಪಾಪ್ ಐಕಾನ್ ಎಂದೇ ವಿಶ್ವದ್ಯಾಂತ ಪರಿಚಯ. ಈಗಾಗಲೇ ಜಸ್ಟಿನ್ ಬೈಬರ್ ಮುಂಬೈಗೆ ಆಗಮಿಸಿದ್ದು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭದಲ್ಲಿ ಸಂಗೀತಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಇದಕ್ಕಾಗಿಯೇ ಪಾಪ್ ಸೆನ್ಸೇಷನ್ ಜಸ್ಟಿನ್ ಬೈಬರ್ ಅವರು 83 ಕೋಟಿ ರೂಪಾಯಿಗಳನ್ನು ಚಾರ್ಜ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಂಟರ್ನ್ಯಾಷನಲ್ ಪಾಪ್ ಸೆನ್ಸೇಷನ್ ರಿಹಾನ್ನಾ, ಬೆಯೋನ್ಸ್ ಮತ್ತು ಎಕಾನ್‌ಗಿಂತ ಬೈಬರ್ ಅಧಿಕ ಹಣ ಪಡೆದಿದ್ದಾರೆ ಎನ್ನಲಾಗಿದೆ. ಕೇವಲ ಒಂದು ಕಾರ್ಯಕ್ರಮಕ್ಕಾಗಿ ಮುಖೇಶ್ ಅಂಬಾನಿ ಭಾರೀ ಮೊತ್ತದ ಹಣ ಕೊಟ್ಟಿದ್ದಕ್ಕೆ ಎಲ್ಲರೂ ಅಶ್ಚರ್ಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ನಾಳೆ (ಜು.5) ಪ್ರಿ ವೆಡ್ಡಿಂಗ್ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಬಾಲಿವುಡ್ ನಟ, ನಟಿಯರು, ಉದ್ಯಮಿಗಳು, ಕ್ರಿಕೆಟರ್ಸ್ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಇಂತಹ ಅದ್ಧೂರಿ ಸಮಾರಂಭದಲ್ಲಿ ಪಾಪ್ ಐಕಾನ್ ಜಸ್ಟಿನ್ ಬೈಬರ್ ಸಂಗೀತಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇನ್ನು ಜಸ್ಟಿನ್ ಬೈಬರ್ 2022ರಲ್ಲೇ ಭಾರತಕ್ಕೆ ಬರಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಬಂದಿರಲಿಲ್ಲ ಎಂದು ತಿಳಿದು ಬಂದಿದೆ.