ರಾಜಕೀಯ ಧುರೀಣರು ಆಗಿದ್ದಾಂಗೆ ಮಾಡುವ ಕೆಲ ಸಂಗತಿಗಳು ಸಾಕಷ್ಟು ವೈರಲ್ ಆಗುತ್ತದೆ. ಫೋಟೋಶೂಟ್, ಯಾತ್ರೆ, ಹೇಳಿಕೆ ಹೀಗೆ ಪ್ರತಿಯೊಂದು ವೈರಲ್ ಆಗುತ್ತದೆ. ಅದಕ್ಕೊಂದಷ್ಟು ನೆಟ್ಟಿಗರು ವಿಧವಿಧವಾಗಿ ಕಾಮೆಂಟ್ ಮಾಡುತ್ತಾರೆ. ಸದ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮರ ಕಲೆ ಅಭ್ಯಾಸದ ಉಡುಪಿನಲ್ಲಿ ಅಖಾಡದಲ್ಲಿ ಕಾಣಿಸಿಕೊಂಡ ವಿಡಿಯೋ ಸದ್ದು ಮಾಡುತ್ತಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಮಾರ್ಷಲ್ಸ್ ಆರ್ಟ್ಸ್ ಗೊತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಸಮರ ಕಲೆ ಅಭ್ಯಾಸ ಹಾಗೂ ಮಾರ್ಷಲ್ಸ್ ಆರ್ಟ್ಸ್ ಪ್ರದರ್ಶನದ ವಿಡಿಯೋ ಬಿಡುಗಡೆ ಮಾಡಿದ್ದು, ನೆಟ್ಟಿಗರು ಹೌಹಾರುವಂತೆ ಮಾಡಿದೆ.
ರಾಹುಲ್ ಗಾಂಧಿ ಅವರು ತಮ್ಮ ಭಾರತ್ ಜೋಡೋ ಯಾತ್ರೆ ವೇಳೆ ಕ್ಯಾಂಪ್ ಒಂದರಲ್ಲಿ ತಾವು ಕಲಿತ ಮಾರ್ಷಲ್ಸ್ ಆರ್ಟ್ಸ್ ಅನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟಿದ್ದಾರೆ. ಈ ವಿಡಿಯೋವನ್ನು ಈಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಭಾರತ್ ಜೋಡೋ ಯಾತ್ರೆ ವೇಳೆ ನಾವು ಸಾವಿರಾರು ಕಿಲೋ ಮೀಟರ್ ಪ್ರಯಾಣ ಬೆಳೆಸಿದವು. ನಮ್ಮ ಕ್ಯಾಂಪ್‌ನಲ್ಲಿ ಜಿಯು-ಜಿಟ್ಸು ಅಭ್ಯಾಸ ಮಾಡುತ್ತಿದ್ದೆವು. ಫಿಟ್ ಆಗಿರಲು ಈ ಸಮರ ಕಲೆ ಸಹಕಾರಿಯಾಗಲಿದೆ ಎಂದಿದ್ದಾರೆ. ಈ ಸಮರ ಕಲೆಯನ್ನು ಎಲ್ಲರಿಗೂ ತಿಳಿಸಲು ಶೀಘ್ರವೇ ಭಾರತ ಡೋಜೊ ಯಾತ್ರೆ ಬರಲಿದೆ ಎಂದು ರಾಹುಲ್ ಗಾಂಧಿ ಅವರು ತಿಳಿಸಿದ್ದಾರೆ.