ಜಪಾನ್‌ನಲ್ಲಿ ಉಂಟಾಗಿರುವ ಭೂಕಂಪದ ಎಪಿಸೆಂಟರ್ ಅಲ್ಲಿನ ಇಶಿಗಾವಾದ ನೋಟೋ ಎಂಬ ಪ್ರದೇಶದಲ್ಲಿದೆ ಎಂದು ವರದಿಯಾಗಿದೆ. ಈ ಭಾಗದಲ್ಲಿ 4.0 ತೀವ್ರತೆಗೂ ಹೆಚ್ಚಿನ ಒಟ್ಟು 21 ಭೂಕಂಪನಗಳು ಉಂಟಾಗಿ ಸುನಾಮಿ ಭೀತಿ ಉಂಟುಮಾಡಿವೆ. ಇನ್ನು 7.4 ತೀವ್ರತೆಯ ಭಾಕಂಪಕ್ಕೆ ನೋಟೋ ಪ್ರದೇಶದ ಕಟ್ಟಡಗಳು, ರಸ್ತೆಗಳನ್ನು ಹಾನಿಗೊಳಿಸಿದೆ.
ಹಲವೆಡೆ ಭೂಮಿ ಬಾಯ್ಬಿಟ್ಟಿದೆ. ಭೂಕಂಪದ ಪರಿಣಾಮ, ಸರಿಸುಮಾರು 34 ಸಾವಿರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಪ್ರಮುಖ ಹೆದ್ದಾರಿಗಳು ಸಂಪೂರ್ಣ ಹಾನಿಯಾಗಿದೆ. ಸುನಾಮಿಯ ಅಲೆಗಳು ಚೀನಾದ ಟೊಯಾಮ ನಗರಕ್ಕೂ ಅಪ್ಪಳಿಸಿದ್ದಾಗಿ ವರದಿಯಾಗಿದೆ.
ಸುಮಾರು 1.2 ಮೀಟರ್ ಎತ್ತರದ ಅಲೆಗಳು ಅಪ್ಪಳಿಸಿರುವ ವೀಡಿಯೋ ಸೆರೆಯಾಗಿದೆ. ಈ ಬೆನ್ನಲ್ಲೇ ಜಪಾನ್ ಹತ್ತಿರದಲ್ಲಿರೋ ರಷ್ಯಾದ ಸಖಾಲಿನ್ ದ್ವೀಪ ಹಾಗೂ ವ್ಲಾಡಿಯೋಸ್ಟಾಕ್ ನಗರಕ್ಕೆ ʻಸುನಾಮಿ ಅಲರ್ಟ್ʼ ನೀಡಲಾಗಿದೆ. ಇವೆಲ್ಲದರ ನಡುವೆ ಇದೀಗ ಜಪಾನ್‌ನಲ್ಲಿರುವ ಭಾರತೀಯ ಎಂಬಸಿ, ಎಮರ್ಜೆನ್ಸಿ ಕಂಟ್ರೋಲ್ ರೂಮ್ ಸೆಟಪ್ ಮಾಡಿದೆ. ಈ ಮೂಲಕ ಜಪಾನ್‌ನ ಭೂಕಂಪಕ್ಕೆ ಸಂಬಂಧಿಸಿ ಯಾರ್ ಬೇಕಾದರೂ ಈ ಕಂಟ್ರೋಲ್ ರೂಮ್ ಸಂಪರ್ಕಿಸಿ ಸಹಾಯ ಪಡೆಯಬಹುದಾಗಿದೆ.
ಜಪಾನ್‌ನಲ್ಲಿ 5 ಅಡಿಗೂ ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಭೂಕಂಪ ಉಂಟಾದ ಕೇಂದ್ರದ 300 ಕಿಲೋ ಮೀಟರ್ ರೇಡಿಯಸ್‌ವರೆಗೆ ಸುನಾಮಿ ಅಲೆಗಳು ತಲುಪಲಿವೆ ಅಂತ ಅಲರ್ಟ್ ನೀಡಲಾಗಿದೆ. ಇದರೊಂದಿಗೆ ದಕ್ಷಿಣ ಕೊರಿಯಾದ ಗ್ಯಾಂಗ್ವಾನ್ ಪ್ರಾಂತ್ಯದ ಜನರಿಗೂ ಕೂಡ ಮುನ್ನೆಚ್ಚರಿಕೆ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ತಗ್ಗು ಪ್ರದೇಶದಿಂದ ಎತ್ತರದ ಪ್ರದೇಶಕ್ಕೆ ಸ್ಥಳಾಂತರವಾಗೋಕೂ ಸೂಚನೆ ನೀಡಲಾಗಿದೆ. ಯಾಕಂದ್ರೆ ಭೂಕಂಪದಿಂದಾಗಿ ಗ್ಯಾಂಗ್ವಾನ್ ಪ್ರಾಂತ್ಯದಲ್ಲಿ ಸಮುದ್ರ ಮಟ್ಟ ಏರಿಕೆಯಾಗಲಿದೆ ಅಂತ ದಕ್ಷಿಣ ಕೊರಿಯಾದ ಹವಮಾನ ಸಂಸ್ಥೆ ತಿಳಿಸಿದೆ.