Monday, December 9, 2024

ಶಿಕ್ಷಣ ಸಚಿವ ಮಧು ಬಂಗಾರಪ್ಪ ಚೆಕ್‌ಬೌನ್ಸ್‌ ಕೇಸ್: 6.96 ಕೋಟಿ ರೂ. ದಂಡ ಅಥವಾ 6 ತಿಂಗಳು ಜೈಲು ವಿಧಿಸಿದ ಕೋರ್ಟ್

ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ 2011ರ ಚೆಕ್‌ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 6.96 ಕೋಟಿ ರೂ. ದಂಡವನ್ನು ವಿಧಿಸಿ ಆದೇಶಿಸಿದೆ. ದಂಡ ಪಾವತಿ ಮಾಡದಿದ್ದರೆ 6 ತಿಂಗಳು ಜೈಲುವಾಸ ಅನುಭವಿಸುವಂತೆ ಆದೇಶಿಸಲಾಗಿದೆ.

ರಾಜ್ಯದ ಆಕಾಶ್ ಆಡಿಯೋ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಧು ಬಂಗಾರಪ್ಪ ಅವರು, ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಗೆ ನೀಡಲಾಗಿದ್ದ 6.60 ಕೋಟಿ ರೂಪಾಯಿ ಮೌಲ್ಯದ ಚೆಕ್ ಬೌನ್ಸ್‌ ಆಗಿತ್ತು. ಆದರೆ, ಈ ಬಗ್ಗೆ ವಿಚಾರಣೆ ಮಾಡಿದಾಗ ಉಡಾಫೆಯಾಗಿ ವರ್ತಿಸಿದ ಮಧು ಬಂಗಾರಪ್ಪ ವಿರುದ್ಧ ರಾಜೇಶ್‌ ಎಕ್ಸ್‌ಪೋರ್ಟ್‌ ಸಂಸ್ಥೆಯಿಂದ ಚೆಕ್‌ಬೌನ್ಸ್‌ ಪ್ರಕರಣವನ್ನು ದಾಖಲಿಸಲಾಗಿತ್ತು.

ನ್ಯಾಯಾಲಯ ವಿಧಿಸಿದ 6.96 ಕೋಟಿ ರೂ. ದಂಡ ಪಾವತಿಸಬೇಕು ಅಥವಾ 6 ತಿಂಗಳ ಸೆರೆವಾಸ ಅನುಭವಿಸಬೇಕು ಎಂದು ಸಚಿವ ಮಧು ಬಂಗಾರಪ್ಪಗೆ ಶಿಕ್ಷೆ ನೀಡಲಾಗಿದೆ. ಇನ್ನು ದಂಡದ ಹಣದಲ್ಲಿ 6,96,60,000 ರೂ. ಹಣವನ್ನು ದೂರುದಾರರಿಗೆ ಪರಿಹಾರವಾಗಿ ನೀಡಬೇಕು. ಉಳಿದ 10 ಸಾವಿರ ರೂ. ಹಣವನ್ನು ಸರ್ಕಾರಕ್ಕೆ ದಂಡವಾಗಿ ಪಾವತಿಸಬೇಕು ಎಂದು ಆದೇಶ ಹೊರಡಿಸಿದೆ.

Related Articles

Latest Articles