ಐಪಿಎಲ್ 2025: ಆರ್‌ಸಿಬಿ ಹಾಗೂ ಡಿಸಿ ನಡುವಿನ ಪಂದ್ಯಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು 6 ವಿಕೆಟ್ಗಳಿಂದ ಸೋಲನ್ನು ಅನುಭವಿಸಿದೆ. ಆ ಮೂಲಕ ಚಿನ್ನಸ್ವಾಮಿಯಲ್ಲಿ ಆಗಿದ್ದ ಸೋಲಿನ ಸೇಡನ್ನು ಅರುಣ್ ಜೇಟ್ಲಿ ಸ್ಟೇಡಿಯಮ್‌ನಲ್ಲಿ ತೀರಿಸಿಕೊಂಡಿದೆ ಆರ್‌ಸಿಬಿ. ಅಷ್ಟಲ್ಲದೆ ಕೊಹ್ಲಿಯ ಹೋಮ್ ಗ್ರೌಂಡ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಇಷ್ಟಲ್ಲದೆ ಅಂದು ಕೆಎಲ್ ರಾಹುಲ್ ಮಾಡಿದ ಅದೇ ಸ್ಟೈಲನ್ನು ನಕಲು ಮಾಡಿ ಆತ್ಮೀಯತೆ ಮೆರೆದಿದ್ದಾರೆ.
ಈ ಗೆಲುವಿನ ಬೆನ್ನಲ್ಲೇ ಡೆಲ್ಲಿ ಆಟಗಾರ ಕೆ.ಎಲ್.ರಾಹುಲ್ ಅವರನ್ನು ಕೊಹ್ಲಿ ತಮಾಷೆಯಾಗಿ ಆಡ್ಕೊಂಡಿದ್ದಾರೆ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆ.ಎಲ್.ರಾಹುಲ್, ಅದ್ಭುತವಾಗಿ ಆಡಿದ್ದರು. ಕೊನೆಯವರೆಗೂ ಕ್ರೀಸ್ನಲ್ಲಿದ್ದ ರಾಹುಲ್, ಗೆದ್ದ ಬಳಿಕ ಕಾಂತಾರ ಸ್ಟೈಲ್ನಲ್ಲಿ ಸೆಲೆಬ್ರೇಷನ್ ಮಾಡಿದ್ದರು. ಇದು ನನ್ನ ಮೈದಾನ, ನನ್ನ ತವರು, ನನಗಾಗಿ ಬಂದಿರುವ ಕರ್ನಾಟಕದ ಅಭಿಮಾನಿಗಳು ನನ್ನ ಹೃದಯದಲ್ಲಿದ್ದೀರಿ ಎಂದು ರಾಹುಲ್ ಹೇಳಿದ್ದರು. ಈಗ ಇದನ್ನೆ ಕಿಂಗ್ ಕೊಹ್ಲಿ ಅನುಕರಣೆ ಮಾಡಿದ್ದಾರೆ.
ಡಿಸಿ ಹಾಗೂ ಆರ್‌ಸಿಬಿ ನಡುವಿನ ಪಂದ್ಯಾಟದಲ್ಲಿ ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಇನ್ನೇನು ತಂಡ ಗೆಲ್ಲುತ್ತೆ ಅನ್ನುವಷ್ಟರಲ್ಲಿ 51 ರನ್ಗಳಿಸಿ ಔಟ್ ಆದರು. ಕೊನೆಗೂ ಆರ್‌ಸಿಬಿ ಗೆದ್ದು ಬೀಗಿತು. ಬಳಿಕ ಕೊಹ್ಲಿ ಪೆವಿಲಿಯನ್ನಲ್ಲಿ ಜೋರಾಗಿ ಸಂಭ್ರಮಿಸಿದ್ದರು.
ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಹಾಗೂ ರಾಹುಲ್ ಮತ್ತೆ ಮುಖಾಮುಖಿ ಆದರು. ಕೆ.ಎಲ್.ರಾಹುಲ್, ಕನ್ನಡಿಗರಾದ ದೇವದತ್ತ ಪಡಿಕ್ಕಲ್, ಕರುಣ್ ನಾಯರ್ ಜೊತೆ ನಿಂತು ಮಾತನಾಡುತ್ತಿದ್ದರು.
ಅಲ್ಲಿಗೆ ಆಗಮಿಸಿದ ವಿರಾಟ್, ರಾಹುಲ್ ಅಂದು ಮಾಡಿದ್ದ ಕಾಂತಾರ ಸ್ಟೈಲ್ನ ಸೆಲೆಬ್ರೇಷನ್ ಮಾಡಿ ತಮಾಷೆ ಮಾಡಿದರು. ಅದಕ್ಕೆ ಕೆ.ಎಲ್.ರಾಹುಲ್, ಅದು ಅಲ್ಲಿ ಅನ್ನೋ ರೀತಿಯಲ್ಲಿ ಕೈತೋರಿಸಿ ನಕ್ಕರು. ಆಗ ಕೊಹ್ಲಿ ಜೋರಾಗಿ ನಕ್ಕು ರಾಹುಲ್ರನ್ನು ಆತ್ಮೀಯವಾಗಿ ತಬ್ಬಿಕೊಂಡರು. ಕೊಹ್ಲಿ ಮತ್ತು ರಾಹುಲ್ ನಡುವಿನ ಆತ್ಮೀಯ ಸಂಭಾಷಣೆ ಎಲ್ಲರ ಮನಗೆದ್ದಿದೆ.
https://twitter.com/OneKohli/status/1916552583121973440?t=FpBPA-_EfmSYWeVZLav8lA&s=19