Sunday, May 18, 2025

Insta Influencer ಆತ್ಮಹತ್ಯೆ ಪ್ರಕರಣ; ಅತ್ಯಾಚಾರ ಎಸಗಿದ ಪ್ರಿಯಕರ ಅರೆಸ್ಟ್

ತಿರುವನಂತಪುರಂ: ಪ್ಲಸ್ 2 ವಿದ್ಯಾರ್ಥಿನಿ, ಇನ್‌ಸ್ಟಾಗ್ರಾಮ್ ಇನ್ಫ್ಲೂಯೆನ್ಸರ್‍ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿನೋಯ್ ಎಂದು ಗುರುತಿಸಲಾಗಿದೆ.

ಇನ್‌ಸ್ಟಾಗ್ರಾಮ್ ಪ್ರಭಾವಿಯೂ ಆಗಿರುವ ಯುವಕ ಹಾಗೂ ಯುವತಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವೇಳೆ ದೌರ್ಜನ್ಯ ನಡೆದಿದೆ. ಅವರು ಐದು ತಿಂಗಳ ಹಿಂದೆ ಬೇರ್ಪಟ್ಟರು. ಆರೋಪಿ ಸ್ನೇಹಿತ ಬಿನೋಯ್‌ ರೆಸಾರ್ಟ್ ಮತ್ತು ಮನೆಯಲ್ಲಿ ‌ಅಪ್ರಾಪ್ತೆಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಗರ್ಭಪಾತಕ್ಕೆ ಮಾತ್ರೆಗಳನ್ನು ಖರೀದಿಸಿ ನೀಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ತಿರುವನಂತಪುರಂ ಪೋಕ್ಸೋ ನ್ಯಾಯಾಲಯವು ಬಿನೋಯ್‌ನನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. 18 ವರ್ಷ ತುಂಬುವ ಮುನ್ನವೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಬಿನೋಯ್ ವಿರುದ್ಧ ಪೋಕ್ಸೋ ಆರೋಪ ಹೊರಿಸಲಾಗಿದೆ. ಅಕ್ರಮ ಗರ್ಭಪಾತಕ್ಕೆ ಸೆಕ್ಷನ್ 312 ಕೂಡ ವಿಧಿಸಲಾಗಿದೆ.

ಮೃತ ಬಾಲಕಿ ತ್ರಿಕನ್ನಪುರಂ ಮೂಲದವರು. ಆಕೆ ತಿರುವನಂತಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಇದೇ ತಿಂಗಳ 10ರಂದು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಕೆ ಜೂ. 16ರಂದು ಮೃತಪಟ್ಟಿದ್ದಳು.

Related Articles

Latest Articles