Wednesday, December 11, 2024

ಭಾರತೀಯ ನೌಕಾಪಡೆಗೆ ಮೊದಲ ಮಹಿಳಾ ಕಮಾಂಡಿಂಗ್ ಅಧಿಕಾರಿ ನೇಮಕ

ಭಾರತೀಯ ನೌಕಾಪಡೆಯಲ್ಲಿ‌ ಮಹತ್ವದ ಬದಲಾವಣೆಯಾಗಿದೆ. ಇದೇ ಮೊದಲ ಬಾರಿಗೆ ಭಾರತೀಯ ನೌಕಾಪಡೆಗೆ ಮಹಿಳಾ ಕಮಾಂಡಿಂಗ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ತಿಳಿಸಿದ್ದಾರೆ.

ನೌಕಾಪಡೆ ದಿನಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಶ್ರೇಣಿಯ ಹುದ್ದೆಗಳಲ್ಲಿಯೂ ಮಹಿಳೆಯರನ್ನು ನೇಮಕ ಮಾಡುವ ಗುರಿ ಇದೆ.

ಭಾರತೀಯ ನೌಕಾಪಡೆಯು ನೌಕಾ ಹಡಗಿನಲ್ಲಿ ಮೊದಲ ಮಹಿಳಾ ಕಮಾಂಡಿಂಗ್ ಅಧಿಕಾರಿಯನ್ನು ನೇಮಕ ಮಾಡಿದೆ. ಪ್ರಸ್ತುತ ಮಹಿಳಾ ಅಗ್ನಿ ವೀರರ ಒಟ್ಟಾರೆ ಸಾಮರ್ಥ್ಯ 1,000 ಗಡಿಯನ್ನು ದಾಟಿದ್ದು, ಈ ಅಂಕಿ ಅಂಶದಿಂದ ಮಹಿಳೆಯರನ್ನು ಎಲ್ಲಾ ಶ್ರೇಣಿಯ ಹುದ್ದೆಗಳಲ್ಲಿ ನೇಮಕ ಮಾಡುವ ತತ್ವಕ್ಕೆ ಸಾಕ್ಷಿಯಾಗಿದೆ ಎಂದರು.

ಕಳೆದ 1 ವರ್ಷದಲ್ಲಿ ಭಾರತೀಯ ನೌಕಾಪಡೆಯ ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಹಾಗೂ ವಿಮಾನಗಳು ಆಯಕಟ್ಟಿನ ನೀರಿನಲ್ಲಿ ಅಧಿಕ ಕಾರ್ಯಾಚರಣೆ ಮಾಡಿದೆ. ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಣೆ ಮಾಡಲು ಹಾಗೂ ಉತ್ತೇಜಿಸಲು ನಮ್ಮ ಘಟಕಗಳನ್ನು ಹಿಂದೂ ಮಹಾಸಾಗರದ ಪ್ರದೇಶ ಮತ್ತು ಅದರಾಚೆಗೆ ನಿಯೋಜನೆ ಮಾಡಲಾಗಿದೆ. ನಾವು ತೆಗೆದುಕೊಳ್ಳುವಂತಹ ಪ್ರತಿಯೊಂದು ಕ್ರಿಯೆಯು ನಮ್ಮ ಮಹಿಳೆಯರು ಹಾಗೂ ಪುರುಷರನ್ನು ಕಾರ್ಯಾಚರಣೆಯ ಘಟಕಗಳಲ್ಲಿ ಸಕ್ರಿಯರಾಗುವಂತೆ ಮಾಡುವ ಗುರಿ ಹೊಂದಿದೆ ಎಂದು ಹೇಳಿದರು.

Related Articles

Latest Articles