ಶ್ರೀಲಂಕಾ ನೌಕಾಪಡೆಯು ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 37 ಭಾರತೀಯ ಮೀನುಗಾರರನ್ನು ಬಂಧಿಸಿದ್ದಾರೆ. ಅವರಿದ್ದ ಐದು ದೋಣಿಗಳನ್ನು ಸಹ ವಶಪಡಿಸಿಕೊಂಡಿದೆ. ಗೌಪ್ಯ ಮೂಲಗಳ ಪ್ರಕಾರ, ಶ್ರೀಲಂಕಾದ ಸಮುದ್ರ ಗಡಿಗಳಲ್ಲಿ ಚೀನಾದ ನೌಕಾಪಡೆಯ ಬೇಹುಗಾರಿಕಾ ಹಡಗು ಲಂಗರು ಹಾಕಿದ ನಂತರ ನೌಕಾಪಡೆಯು ಗಸ್ತು ಚಟುವಟಿಕೆಗಳನ್ನು ತೀವ್ರಗೊಳಿಸಿದೆ.
ಮೊದಲನೇ ಪ್ರಕರಣದಲ್ಲಿ ತಲೈಮನ್ನಾರ್ ಬಳಿ ಮೀನುಗಾರಿಕೆ ನಡೆಸುತ್ತಿದ್ದ ರಾಮೇಶ್ವರಂನ 23 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಸುತ್ತುವರಿದಿವೆ. ನಂತರ ಅವರನ್ನು ಬಂಧಿಸಿದ್ದು, ಅವರ ಮೂರು ದೋಣಿಗಳನ್ನು ತಲೈಮನ್ನಾರ್ ನೌಕಾ ಶಿಬಿರಕ್ಕೆ ಕರೆದೊಯ್ಯುವ ಮೊದಲು ವಶಪಡಿಸಿಕೊಳ್ಳಲಾಯಿತು.
ಮತ್ತೊಂದು ಘಟನೆಯಲ್ಲಿ ನೆಡುಂತೀವು ಬಳಿ 14 ಮೀನುಗಾರರನ್ನು ಬಂಧಿಸಲಾಗಿದ್ದು, ಅವರ ಎರಡು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಅವರನ್ನು ಮಾಯಿಲಟ್ಟಿ ಶಿಬಿರಕ್ಕೆ ಕರೆದೊಯ್ಯಲಾಗಿದೆ. ಅಕ್ಟೋಬರ್ 14 ರಿಂದ, ಶ್ರೀಲಂಕಾ ನೌಕಾಪಡೆಯು 64 ಮೀನುಗಾರರನ್ನು ಬಂಧಿಸಿದೆ ಮತ್ತು ಪ್ರತ್ಯೇಕ ಘಟನೆಗಳಲ್ಲಿ 10 ದೋಣಿಗಳನ್ನು ವಶಪಡಿಸಿಕೊಂಡಿದೆ.