ಇಂಡೋ-ಪಾಕ್ ಪಂದ್ಯ ಅಂದ್ರೆ ಬರಿ ಕಣ್ಣಿಗಷ್ಟೇ ಹಬ್ಬ ಅಲ್ಲ. ಪ್ರಸಾರ ವಾಹಿನಿಗೂ ದೊಡ್ಡ ಹಬ್ಬ. ಬದ್ಧವೈರಿಗಳ ಕಾದಾಟದಿಂದ ಸ್ಟಾರ್ ಇಂಡಿಯಾ ವಾಹಿನಿ ನಸೀಬು ತೆರೆದಿದೆ.
ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಡದೇ ದಶಕಗಳೇ ಕಳೆದಿವೆ. ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿಗಳು ಕಾದಾಡಲಿದ್ದು ಮೆಗಾ ಬ್ಯಾಟಲ್ಗೆ ಇನ್ನಿಲ್ಲದ ಡಿಮ್ಯಾಂಡ್ ಕುದುರಿದೆ.
ಇಂಡೋ-ಪಾಕ್ ನೋಡುಗರಿಗೆ ಇನ್ನಿಲ್ಲದ ಮನರಂಜನೆ ನೀಡುತ್ತೆ ನಿಜ. ಆದ್ರೆ ಪಂದ್ಯಾವಳಿ ಆಯೋಜಿಸುವ ಐಸಿಸಿ ಹಾಗೂ ಸ್ಟಾರ್ ವಾಹಿನಿ ಈ ಪಂದ್ಯದಿಂದ ಕೋಟಿ ಕೋಟಿ ಹಣ ಜೇಬಿಗಿಳಿಸುತ್ತೆ. ಭಾನುವಾರ ನಡೆಯುವ ಬಿಗ್ ಗೇಮ್ನಿಂದ ಸ್ಟಾರ್ ಇಂಡಿಯಾ ವಾಹಿನಿಗೆ ಬಂಪರ್ ಜಾಕ್ಪಾಟ್ ಹೊಡೆದಿದ್ದು, ಸೆಕೆಂಡ್ಸ್ಗೆ ಲಕ್ಷ ಲಕ್ಷ ಹಣ ಜೇಬಿಗಿಳಿಸಿಕೊಳ್ತಿದೆ.
ಭಾರತ-ಪಾಕ್ ಪಂದ್ಯ ಅಂದ್ರೆ ಪ್ರಸಾರ ವಾಹಿನಿಗಳಿಗೆ ದೊಡ್ಡ ಹಬ್ಬ. ಈ ಒಂದೇ ಒಂದು ಪಂದ್ಯದಿಂದ ನೂರಾನೂರು ಕೋಟಿ ರೂಪಾಯಿ ಗಳಿಸ್ತಾರೆ. ಈ ಸಲವು ಅದರಿಂದ ಹಿಂದೆ ಬಿದ್ದಿಲ್ಲ. ಕಳೆದ ಬಾರಿಗೆ ಹೋಲಿಸಿದ್ರೆ ಜಾಹೀರಾತಿನ ದರ 22-25% ಹೆಚ್ಚಾಗಿದೆ. ಪಂದ್ಯ ಪ್ರಸಾರದ ಟಿವಿ ಹಕ್ಕು ಪಡೆದಿರೋ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಆ ದಿನ 10 ಸೆಕೆಂಡ್ಸ್ ಜಾಹೀರಾತಿಗೆ ಬರೋಬ್ಬರಿ 50 ಲಕ್ಷ ರೂಪಾಯಿ ಗಳಿಸಲಿದೆ. ಈಗಾಗ್ಲೇ ಈ ಮ್ಯಾಚ್ನ ಶೇಕಡಾ 90 ರಷ್ಟು ಜಾಹೀರಾತು ಫುಲ್ ಆಗಿದೆ.
ಬರೀ ಅಡ್ವರ್ಟೈಸ್ಮೆಂಟ್ ಅಲ್ಲ ಇಂಡೋ-ಪಾಕ್ ಪಂದ್ಯದ ಟಿಕೆಟ್ ದರವು ಗಗನಕುಸುಮವಾಗಿದೆ. ನಸೌ ಕೌಂಟಿ ಸ್ಟೇಡಿಯಂನಲ್ಲಿ 3 ಬಗೆಯ ಟಿಕೆಟ್ ಪ್ಯಾಕೇಜ್ ಇದ್ದು, ಒಂದೊಂದರ ಬೆಲೆ ಲಕ್ಷ ಲಕ್ಷ ಮೀರಿದೆ. ಡೈಮಂಡ್ ಕ್ಲಬ್ ಟಿಕೆಟ್ ಬೆಲೆ 8,34,323 ರೂ ಆದ್ರೆ ಪ್ರೀಮಿಯಮ್ ಕ್ಲಬ್ 2,08,585 ಹಾಗೂ ಕಾರ್ನರ್ ಕ್ಲಬ್ ಗರಿಷ್ಠ ಬೆಲೆ 15 ಲಕ್ಷದ 2 ಸಾವಿರ ರೂಪಾಯಿ ಆಗಿದೆ. ಲಕ್ಷ ಲಕ್ಷ ಕೊಟ್ರೂ ಟಿಕೆಟ್ಗೆ ಡಿಮ್ಯಾಂಡ್ ಮಾತ್ರ ತಪ್ಪಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಟಿಕೆಟ್ ಬೆಲೆ ಕೋಟಿ ಆದ್ರೂ, ಅಚ್ಚರಿ ಪಡಬೇಕಿಲ್ಲ.!