ಬಿಹಾರದಲ್ಲಿ ಮದ್ಯ ನಿಷೇಧ ಮಾಡಲಾಗಿದೆ. ಆದರೂ ಕೆಲವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾರೆ. ಕಾರೊಂದರಲ್ಲಿ ಮದ್ಯದ ಬಾಟಲಿ ತುಂಬಿಕೊಂಡು ಹೋದಾಗ ಅಪಘಾತ ಸಂಭವಿಸಿದೆ. ಇದೇ ವೇಳೆ ಸ್ಥಳದಲ್ಲಿದ್ದ ಜನರು ಎಲ್ಲವನ್ನೂ ಬಿಟ್ಟು ಮದ್ಯ ಲೂಟಿ ಮಾಡಲು ಆರಂಭಿಸಿದ್ದಾರೆ. ಸಿಕ್ಕಿದೇ ಭಾಗ್ಯ ಎಂದು ಮದ್ಯದ ಬಾಟಲಿಯನ್ನು ಎತ್ತಿಕೊಂಡಿದ್ದಾರೆ.
ಬಿಹಾರದ ಗಯಾದಲ್ಲಿ ಈ ಘಟನೆ ನಡೆದಿದೆ. ಕಾರು ಅಪಘಾತವಾದ ನಂತರ ಕಾರಿನಲ್ಲಿ ಮದ್ಯ ತುಂಬಿರುವುದು ಜನರಿಗೆ ತಿಳಿದು ಬಂತು. ಚಾಲಕನ ಪರಿಸ್ಥಿತಿ ಏನಾಗಿರಬಹುದು ಎಂದೂ ನೋಡದೆ ಅಲ್ಲಿದ್ದ ಜನರು ಮದ್ಯ ಲೂಟಿ ಮಾಡಲು ಶುರು ಮಾಡಿದ್ದಾರೆ. ಆದರೆ, ಆ ವೇಳೆಗಾಗಲೇ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಸ್ತೆ ಮಧ್ಯದಲ್ಲಿ ಅಪಘಾತಕ್ಕೀಡಾಗಿ ನಿಂತ ಕಾರಿನ ಬಳಿ ಜನರು ಮದ್ಯದ ಬಾಟಲಿಗಳನ್ನು ಹಿಡಿದುಕೊಂಡು ಓಡುತ್ತಿರುವ ದೃಶ್ಯ ಕಂಡು ಬಂದಿದೆ.
ಅಕ್ಕಪಕ್ಕದಲ್ಲಿ ದೊಡ್ಡ ವಾಹನಗಳು ಹಾದು ಹೋಗುತ್ತಿದ್ದರೂ ಯಾರೂ ಕ್ಯಾರೇ ಎನ್ನದೆ, ಕೇವಲ ಮದ್ಯವನ್ನು ಲೂಟಿ ಮಾಡುವುದರಲ್ಲಿ ನಿರತರಾಗಿದ್ದಾರೆ.
Watch video
https://youtu.be/tQKHmnQ1Znw?si=8yukiN-YdnNLLy6Y