Tuesday, March 18, 2025

ಮಂಗಳೂರು: ಡೆಂಗ್ಯೂ ಜ್ವರದಿಂದ ಯುವಕ‌ ದುರ್ಮರಣ

ಮಂಗಳೂರು: ಡೆಂಗ್ಯೂ ರೋಗಕ್ಕೆ ವ್ಯಕ್ತಿಯೋರ್ವರು ಬಲಿಯಾಗಿದ್ದಾರೆ. ಉಳ್ಳಾಲ ಹರೇಕಳ ನ್ಯೂಪಡ್ಪು ನಿವಾಸಿ ಸದ್ಯ ನಾಟೆಕಲ್‌ ನಲ್ಲಿ ನೆಲೆಸಿದ್ದ ನವಾಝ್‌ (32) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನವಾಝ್‌ ಗುರುವಾರ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಸಾವನ್ನಪ್ಪಿದ್ದಾರೆ.

ಮಂಗಳೂರಿನ ಬಂದರು ಪ್ರದೇಶದಲ್ಲಿರುವ ಜಿ ಎಲ್‌ ಜಿ ಫಿಶರೀಸ್‌ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ನವಾಝ್‌ ಗೆ ಒಂದು ವರ್ಷದ ಮಗುವಿದೆ.

Related Articles

Latest Articles