ಬೆಂಗಳೂರು: ಹೆಂಡತಿಯನ್ನು ಕೊಲೆಗೈದು ಪತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಗಣಿ ಟೌನ್ನಲ್ಲಿ ನಡೆದಿದೆ. ಅರ್ಬಿಯಾ ತಾಜ್ (24) ಮೃತ ಮಹಿಳೆ. ಮುಬಾರಕ್ (28) ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ಪತಿ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೌಟುಂಬಿಕ ಜಗಳದಿಂದ ಕೋಪಗೊಂಡ ಪತಿ ಮಚ್ಚಿನಿಂದ ಹಲ್ಲೆ ನಡೆಸಿ ಬರ್ಬರ ಕೊಲೆ ಮಾಡಿದ್ದಾನೆ. ಈ ವೇಳೆ ಮಹಿಳೆಯ ಕೂಗಾಟದ ಶಬ್ದ ಕೇಳಿದ ತಾಯಿ ಆಕೆಯ ನೆರವಿಗೆ ಧಾವಿಸಿದ್ದಾಳೆ. ಬಳಿಕ ಪತ್ನಿಯನ್ನು ಕೊಲೆ ಮಾಡಿ ಬಾಗಿಲು ಲಾಕ್ ಮಾಡಿ ಪತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆರೋಪಿ ಪತಿಯನ್ನು ಜಿಗಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ತಿಳದ ಕೂಡಲೇ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.