Sunday, November 3, 2024

ಹೂವಿನ ಲೋಕದ ಅಪ್ಸರೆ ಪೆಟೂನಿಯಾ..! ಆರೈಕೆ ಹೇಗೆ?

ಗಾರ್ಡನ್ ಪ್ರಿಯರ ಅಚ್ಚುಮೆಚ್ಚಿನ ಪುಷ್ಪಗಳಲ್ಲಿ ಪೆಟೂನಿಯಾ ಕೂಡ ಒಂದು. ವಿವಿಧ ಬಣ್ಣಗಳಲ್ಲಿ ಲಭ್ಯವಿರುವ ಈ ಹೂವಿನ ಗಿಡ ಗಾರ್ಡನ್ ಲೋಕದ ಸುಂದರಿ ಅಂದರೂ ತಪ್ಪಿಲ್ಲ. ವಾರ್ಷಿಕವಾಗಿ ಬೆಳೆಯುವ ಈ ಸಸ್ಯದ ಆರೈಕೆಯೂ ಸುಲಭ. ಸರ್ವ ಋತುವಲ್ಲೂ ಹೂ ಬಿಡುವ ಪೆಟೂನಿಯಾದ ಬೆಳೆಸುವ ವಿಧಾನ ಇಲ್ಲಿದೆ.

ಪೆಟೂನಿಯಾ ಹೂಗಿಡದಲ್ಲಿ ಹಲವು ಪ್ರಭೇದಗಳಿವೆ. ಅವುಗಳಲ್ಲಿ ಹೆಚ್ಚಿನವು ಮಿಶ್ರತಳಿ. ವಿಶಾಲವಾದ, ಕಹಳೆ-ಆಕಾರದ ಹೂವುಗಳೊಂದಿಗೆ ವಿವಿಧ ಬಣ್ಣದಲ್ಲಿರುತ್ತದೆ. ನೀಲಿ, ಕೆಂಪು, ಹಳದಿ, ಕೇಸರಿ, ಬಿಳಿ, ಪಿಂಕ್, ಕಪ್ಪು ಹೀಗೆ ವಿವಿಧ ಬಣ್ಣದಲ್ಲಿ ಲಭ್ಯ. ಅಷ್ಟಲ್ಲದೆ ಮಿಶ್ರ ಬಣ್ಣದಲ್ಲೂ ಕಾಣಸಿಗುತ್ತದೆ.

  • ಪೊಟೂನಿಯಾಗಳು ವೇಗವಾಗಿ ಬೆಳೆಯುವ ಸಸ್ಯಗಳಾಗಿವೆ.
  • ಬೀಜಗಳಿಂದ ಸಂತಾನಾಭಿವೃದ್ಧಿ ಸಾಧ್ಯ.
  • ದಿನಕ್ಕೆ ಕನಿಷ್ಠ 6 ಗಂಟೆಗಳ ಸೂರ್ಯನ ಬೆಳಕು ಬೇಕು.
  • ಗೊಬ್ಬರ ಮಿಶ್ರಿತ, ಕಡಿಮೆ ತೇವಯುತ ಮಣ್ಣು ಅತ್ಯಗತ್ಯ.
  • ಅತಿ ಬಿಸಿಲು ಕೂಡ ಗಿಡವನ್ನು ನಾಶ ಮಾಡುತ್ತದೆ.
  • ಮೇಲಿನ 2 ಇಂಚು ಮಣ್ಣು ಒಣಗಿದಂತೆ ಕಂಡಾಗ ನೀರು ಹಾಕಿ.
  • ಆಗಾಗ ಗಿಡಕ್ಕೆ ಬೇಕಾಗುವ ಗೊಬ್ಬರ ಹಾಕಿ. ಇದರಿಂದ ಯಥೇಚ್ಛವಾಗಿ ಹೂವು ಕೊಡುತ್ತದೆ.
  • ಹೂವಿನ ಕುಂಡದಲ್ಲಿ ಸುಲಭವಾಗಿ ಬೆಳೆಸಬಹುದು.
  • ಹ್ಯಾಂಗಿಂಗ್‌ ಕುಂಡದಲ್ಲಿ ಸುಂದರವಾಗಿ ಕಾಣುತ್ತದೆ.

Related Articles

Latest Articles