ಬಾಲಿವುಡ್ನಲ್ಲಿ ಡ್ರಗ್ಸ್ ಬಳಕೆ ಚರ್ಚೆ ಇಂದು ನಿನ್ನೆಯದ್ದಲ್ಲ. ಸದ್ಯ ಭಾರತದ ಖ್ಯಾತ ಗಾಯ ಹನಿ ಸಿಂಗ್ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಸ್ವತಃ ಯೋ ಯೋ ಹನಿ ಏನ್ ಹೇಳಿದ್ದಾರೆ?
ಸುಶಾಂತ್ ಸಿಂಗ್ ನಿಧನದ ಬಳಿಕ ಬಾಲಿವುಡ್ ನಲ್ಲಿ ಸಾಕಷ್ಟು ಹೆಸರುಗಳು ಮುನ್ನೆಲೆಗೆ ಬಂದಿದ್ದವು. ಅನೇಕರ ವಿಚಾರಣೆ ಕೂಡ ಮಾಡಲಾಗಿತ್ತು. ಅದೇ ರೀತಿ ಹನಿ ಸಿಂಗ್ ಕೂಡ ಡ್ರಗ್ಸ್ಗೆ ಅಡಿಕ್ಟ್ ಆಗಿದ್ದರು.

ಹನಿ ಸಿಂಗ್ ಸಂದರ್ಶನವೊಂದರಲ್ಲಿ ಶಾಕಿಂಗ್ ಸತ್ಯ ಬಿಚ್ಚಿಟ್ಟಿದ್ದಾರೆ. ಇದರಲ್ಲಿ ಅವರು ಹಲವಾರು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಶಾಲಿನಿ ತಲ್ವಾರ್ ಜೊತೆ ಅವರು ವಿಚ್ಛೇದನ ಪಡೆದಿದ್ದಾರೆ. ಇದಕ್ಕೆ ಡ್ರಗ್ಸ್ ಚಟವೇ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ ಮದುವೆ ಆದಾಗ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಯಶಸ್ಸು ಅವರ ತಲೆಗೆ ಏರಿತು. ಇದರಿಂದ ಅವರು ಕುಟುಂಬವನ್ನು ನೆಗ್ಲೆಟ್ ಮಾಡಿದ್ದರು.
‘ಕೆಲ ಖ್ಯಾತ ನಾಮರು ನನಗೆ ಡ್ರಗ್ ಅಡಿಕ್ಷನ್ ಮಾಡಿಸಿದರು. ನೀನು ಪಂಜಾಬಿ, ಮದ್ಯ ಸೇವನೆ ಮಾಡುತ್ತಿಯಾ. ಇದನ್ನು ಮಾಡಿ ನೋಡು ಎಂದರು. ಇದರಲ್ಲಿ ಏನಿದೆ? ಮಾಡ್ತೀನಿ ಕೊಡಿ ಎಂದು ನಶೆ ಮಾಡಿದೆ. ನಂತರ ಅದು ಅಡಿಕ್ಷನ್ ಆಯಿತು. ನಾನು ಯಾವಾಗಲೂ ನಶೆಯಲ್ಲಿ ಇರುತ್ತಿದ್ದೆ. ಏನು ಮಾಡುತ್ತಿದ್ದೆ ಅನ್ನೋದು ನನಗೆ ಗೊತ್ತಾಗುತ್ತಾ ಇರಲಿಲ್ಲ’ ಎಂದಿದ್ದಾರೆ ಅವರು.
‘2011ರಲ್ಲಿ ಮದುವೆ ಆದೆ. ನಾನು ಸದಾ ಟ್ರಾವೆಲ್ ಮಾಡುತ್ತಲೇ ಇದ್ದೆ. ಹೀಗಾಗಿ ಸಂಬಂಧ ಚೆನ್ನಾಗಿ ಇರಲಿಲ್ಲ. ಹೆಚ್ಚೆಂದರೆ 9-10 ತಿಂಗಳು ಒಟ್ಟಾಗಿ ಸಂಸಾರ ಮಾಡಿರಬಹುದು. ಆ ಬಳಿಕ ಯಶಸ್ಸು ಸಿಕ್ಕಿತು. ನಾನು ಮನೆಗೆ ಹೋಗೋದನ್ನೇ ನಿಲ್ಲಿಸಿದೆ. ನನ್ನ ತಾಯಿ, ತಂದೆ, ಪತ್ನಿ ಎಲ್ಲರನ್ನೂ ನೆಗ್ಲೆಟ್ ಮಾಡಿದೆ. ನಾನು ಅವರನ್ನು ಕೆಟ್ಟದಾಗಿ ನೋಡಿಕೊಂಡೆ’ ಎಂದು ಹನಿ ಸಿಂಗ್ ಬೇಸರ ಹೊರಹಾಕಿದ್ದಾರೆ. ಇದೆಲ್ಲವನ್ನೂ ಮಾಡದಂತೆ ಅವರು ಕೋರಿಕೊಂಡಿದ್ದಾರೆ.
‘ಅಕ್ಷಯ್ ಕುಮಾರ್ ಆಗಾಗ ಕರೆ ಮಾಡುತ್ತಿದ್ದರು. ಡಾಕ್ಟರ್ ಬಳಿ ಹೋಗುವಂತೆ ದೀಪಿಕಾ ಪಡುಕೋಣೆ ಸೂಚಿಸಿದರು. ಶಾರುಖ್ ಅವರು ಯಾವಾಗಲೂ ಫೋನ್ ಮಾಡುತ್ತಿದ್ದರು. ನನಗೆ ಮಾತನಾಡಲೂ ಆಗುತ್ತಿರಲಿಲ್ಲ. ನನ್ನ ಆರೋಗ್ಯದ ಬಗ್ಗೆ ಸದಾ ಕೇರ್ ಮಾಡುತ್ತಿದ್ದರು’ ಎಂದಿದ್ದಾರೆ ಹನಿ ಸಿಂಗ್.