Friday, June 27, 2025

ಉದ್ದನೆಯ ಉಗುರು, ರಕ್ತದ ಮಡು: ನರಸಿಂಹ ಅವತಾರ ಕಥೆ ಹೇಳುತ್ತಾ ಹೊಂಬಾಳೆಯ ಸಿನೆಮಾ?

ಅದ್ದೂರಿ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ಕನ್ನಡದ ಹೊಂಬಾಳೆ ಫಿಲ್ಮ್ ಮತ್ತೊಂದು ವಿಶೇಷ ಸಿನಿಮಾಕ್ಕೆ ಅಣಿಯಾಗಿದೆ. ಈಗಾಗಲೇ ಈ ಪೋಸ್ಟರ್ ಸಿನಿಲೋಕದಲ್ಲಿ ಸಂಚಲನ ಮೂಡಿಸಿದೆ.

ಈ ಕುರಿತ ಪೋಸ್ಟರ್ ಒಂದನ್ನು ಇಂದು ಹಂಚಿಕೊಂಡಿದ್ದು ತೀವ್ರ ಕುತೂಹಲ ಮೂಡಿದೆ. ಈ ಸಾರಿ ಹೊಂಬಾಳೆ ಫ್ಯಾಂಟಸಿ ಅಥವಾ ಪೌರಾಣಿಕ ಆಧಾರಿತ ಸಿನಿಮಾ ಮಾಡುತ್ತಿದೆ ಎಂದು ನೆಟ್ಟಿಗರು ಮಾತಾಡಿಕೊಳ್ಳುತ್ತಿದ್ದಾರೆ.‌

ನ.16ರ ಮಧ್ಯಾಹ್ನ 3.33 ಕ್ಕೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ ಎಂದು ಹೇಳಿದೆ. ಇದಷ್ಟು ಹೊರತುಪಡಿಸಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಹೊಂಬಾಳೆ ಫಿಲ್ಡ್ ಬಿಟ್ಟು ಕೊಟ್ಟಿಲ್ಲ. ಸದ್ಯ ಹೊಂಬಾಳೆಯ ಈ ಪೋಸ್ಟರ್ ಗೆ ವಿವಿಧ ರೀತಿಯಲ್ಲಿ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನರಸಿಂಹ ಅವತಾರದ ಕಥೆಯೇ?
ಪೋಸ್ಟರ್ ನಲ್ಲಿ ಕೈತುಂಬಾ ರೋಮ, ಕೈಖಡಗ, ನೀಳವಾದ ಚೂಪಾದ ಉಗುರುಗಳು, ಉಗುರಿನಲ್ಲಿ ರಕ್ತದ‌ ಕಲೆಯಿದೆ. ಇದನ್ನು ಊಹಿಸಿ ಜನರು, ಇದೊಂದು ಪೌರಾಣಿಕ ಕಥೆ. ನರಸಿಂಹ ಅವತಾರದ ಕಥೆ ಹೇಳಲು ಹೊರಟಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.‌

Related Articles

Latest Articles