ಉತ್ತರ ಪ್ರದೇಶದ ಕಾನ್ಪುರದಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಮುಸ್ಲಿಂ ಪತ್ನಿ ಮತಾಂತರಕ್ಕೆ ಒತ್ತಾಯಿಸಿದ್ದಾಳೆ ಎಂಬ ಕಾರಣಕ್ಕೆ ಪತಿ ಶುಭಂ ವಾಲ್ಮೀಕಿ (೨೫ ವ) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿಯ ಕಿರುಕುಳದ ಬಗ್ಗೆ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೂರು ವರ್ಷಗಳ ಹಿಂದೆ ಇಬ್ಬರ ನಡುವೆ ವಿವಾಹ ನಡೆದಿತ್ತು. ಕಳೆದೊಂದು ವರ್ಷದಿಂದ ಮತಾಂತರಕ್ಕೆ ಪತ್ನಿ ಮತ್ತು ಆಕೆಯ ತಾಯಿ ಬಲವಂತ ಮಾಡುತ್ತಿದ್ದರು. ಜಗಳದ ನಂತರ ಗಂಡನ ಮನೆ ತೊರೆದು ತವರು ಸೇರಿದ್ದ ಹೆಂಡತಿ ತನ್ನ ಖತರ್ನಾಕ್ ಬುದ್ದಿ ತೋರಿಸಿದ್ದಾಳೆ. ನಕಲಿ ಅತ್ಯಾಚಾರ ಪ್ರಕರಣ ಹಾಕಿಸಿ ಜೈಲಿಗೆ ತಳ್ಳಿದ್ದಾಳೆ. ಅಷ್ಟಲ್ಲದೆ ಶುಭಂನನ್ನ ಹೆದರಿಸಿ ಲಕ್ಷ ಲಕ್ಷ ಪೀಕಿದ್ದಾಳೆ. ಇತ್ತೀಚೆಗಷ್ಟೇ ಜೈಲಿನಿಂದ ರಿಲೀಸ್ ಆಗಿದ್ದ ಶುಭಂ ವಾಲ್ಮೀಕಿ
ಡಿಜೆ ಆಪರೇಟರ್ ಆಗಿ ಕೆಲಸವನ್ನು ಮಾಡುತ್ತಿದ್ದನು ಎನ್ನಲಾಗಿದೆ.
ಶುಭಂ ಸಾಯುವ ಮೊದಲು ವೀಡಿಯೋ ರೆಕಾರ್ಡ್ ಮಾಡಿ ತನ್ನ ಪರಿಸ್ಥಿತಿಗೆ ಪತ್ನಿಯೇ ಕಾರಣ ಅಂತ ದೂಷಿಸಿದ್ದಾನೆ.
ನೀನು ನನ್ನ ಜೀವನವನ್ನು ಹಾಳು ಮಾಡಿದ್ದಿ. ನನ್ನನ್ನು ಇಸ್ಲಾಂಗೆ ಪರಿವರ್ತಿಸಬೇಕೆಂದು ನೀನು ಬಯಸಿದ್ದಿ. ನಾನು ಹಿಂದೂ ಆಗಲು ನಿನ್ನನ್ನು ಕೇಳಲೇ ಇಲ್ಲ. ನೀನು ಹೇಗಿದ್ದೀಯೋ ಹಾಗೆಯೇ ನಾನು ನಿನ್ನನ್ನು ಒಪ್ಪಿಕೊಂಡಿದ್ದೆ. ನನ್ನ ವಿರುದ್ಧ ನಕಲಿ ಅತ್ಯಾಚಾರ ಪ್ರಕರಣವನ್ನೂ ದಾಖಲಿಸಿದ್ದಿ. ಈಗ ನನಗೆ ನನ್ನ ಜೀವನವನ್ನು ಕೊನೆಗೊಳಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂಬುವುದಾಗಿ ಹೇಳಿಕೊಂಡಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ಶುಭಂ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.