ಕಾಸರಗೋಡು: ಹಿಂದೂ ಕಲ್ಚರಲ್ ಸೊಸೈಟಿ ರಿ ಗಣೇಶಕಲಾ ಮಂದಿರ ಮಳ್ಳೇರಿಯಾ ಇದರ ನೂತನ ಆಡಳಿತ ಸಮಿತಿ ರಚನೆಗೊಂಡಿದೆ.
ಅಧ್ಯಕ್ಷರಾಗಿ ಎ. ರಂಗನಾಥ ರಾವ್, ಕಾರ್ಯದರ್ಶಿಯಾಗಿ ಸಂತೋಷ್ ಸಿ.ಎನ್ ಖಜಾಂಚಿಯಾಗಿ ಗಣೇಶ ವತ್ಸ, ಉಪಾಧ್ಯಕ್ಷರಾಗಿ ಎಸ್ ಎನ್ ಪ್ರಸಾದ್ ಆಯ್ಕೆಯಾಗಿದ್ದಾಗಿ ಪ್ರಕಟಣೆ ತಿಳಿಸಿದೆ.
ಸದಸ್ಯರಾಗಿ ಸುಧಾಕರ ಬಿ, ಸಚಿನ್ ಮಾಟೆಡ್ಕ, ದೀನನಾಥ್ ಶೆಣೈ, ನಾರಾಯಣ ಶೆಟ್ಟಿ, ಲೀಲಾಕಿರಣ್ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತತ್ವದಂತೆ ಕಾರ್ಯನಿರ್ವಹಿಸುವ ಈ ಸಂಸ್ಥೆಯ ಅಧೀನದಲ್ಲಿ ಹಲವಾರು ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸಿಕೊಂಡು ಜನಮನ್ನಣೆ ಗಳಿಸಿದೆ. ಗಣೇಶ ಕಲಾ ಮಂದಿರ, ಮುಳ್ಳೇರಿಯಾ ಗಣೇಶೋತ್ಸವ ಸಮಿತಿ, ಮುಳ್ಳೇರಿಯಾ ವಿದ್ಯಾಶ್ರೀ ಶಿಕ್ಷಣ ಕೇಂದ್ರ ಇದೇ ಹಿಂದೂ ಕಲ್ಚರಲ್ ಸೊಸೈಟಿ ಅಧೀನಕ್ಕೆ ಒಳಪಟ್ಟಿದೆ.