Thursday, July 18, 2024

ಕಣ್ಣು ಕುಕ್ಕುವ ಎಲ್‌ಇಡಿ ಲೈಟ್ ಬಳಸಿದ್ರೆ ಹುಷಾರ್! ಸವಾರನಿಗೆ ಬಿತ್ತು 5 ಸಾವಿರ ರೂ. ದಂಡ

ಹೆಚ್ಚಿನ ಪ್ರಖರತೆಯುಳ್ಳ ಎಲ್‌ಇಡಿ ಲೈಟ್ ಗಳನ್ನು ಅಳವಡಿಸಿಕೊಂಡು ಚಲಾಯಿಸುವ ವಾಹನಗಳನ್ನು ತಪಾಸಣೆ ನಡೆಸಿದ ಶಿರಸಿ ನಗರ ಠಾಣೆಯ ಪೊಲೀಸರು ವಾಹನ ಸವಾರರಿಗೆ 5 ಸಾವಿರ ರೂಪಾಯಿ ದಂಡ ವಿಧಿಸಿ, ಎಚ್ಚರಿಕೆ ನೀಡಿದ್ದಾರೆ. ಹೆಚ್ಚಿನ ಪ್ರಖರತೆಯುಳ್ಳ ಎಲ್‌ಇಡಿ ಲೈಟ್ ಗಳನ್ನು ಅಳವಡಿಸಿಕೊಂಡು ವಾಹನ ಚಲಾಯಿಸುವ ಪರಿಣಾಮವಾಗಿ ಎದುರು ಬರುವ ವಾಹನ ಸವಾರರಿಗೆ ಕಣ್ಣುಕುಕ್ಕಿ ರಸ್ತೆ ಅಪಘಾತಗಳು ಸಂಭವಿಸುತ್ತಿದೆ.

ಇದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಶಿರಸಿ ನಗರದ ಬಿಡ್ಕಿಬೈಲ್‌ನಲ್ಲಿ ಶಿರಸಿ ಪೊಲೀಸರು ವಾಹನಗಳ ತಪಾಸಣೆ ನಡೆಸಿ ಎಲ್‌ಇಡಿ ಲೈಟ್ ಗಳನ್ನು ಅಳವಡಿಸಿದ್ದ ವಾಹನ ಸವಾರರ ಮೇಲೆ ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ, 5 ಸಾವಿರ ರೂಪಾಯಿ ದಂಡ ವಿಧಿಸಿದರು.

Related Articles

Latest Articles