Monday, December 9, 2024

ಇನ್ಮುಂದೆ ನಾಯಿ ಕಚ್ಚಿದ್ರೆ ಕನಿಷ್ಠ 10 ಸಾವಿರ ಪರಿಹಾರ; ಹೈಕೋರ್ಟ್​ ಆದೇಶ

ಬೀದಿ ನಾಯಿಗಳನ್ನು ಕಂಟ್ರೋಲ್​ ಮಾಡಿ ಇಲ್ಲದೆ ಹೋದರೆ ಕಡಿತಕ್ಕೆ ಒಳಗಾದ ಸಂತ್ರಸ್ತರಿಗೆ ಪರಿಹಾರ ನೀಡಿ ಎಂದು ಚಂಡೀಗಡ ಹೈಕೋರ್ಟ್​ ಆದೇಶಿಸಿದೆ. ಇನ್ನು ಮುಂದೆ ಒಂದು ವೇಳೆ ನಾಯಿ ಕಚ್ಚಿದರೆ ಒಂದು ಗಾಯಕ್ಕೆ 10 ಸಾವಿರ ಪರಿಹಾರ ನೀಡಬೇಕು ಎಂದು ಚಂಡೀಗಡ ಹೈಕೋರ್ಟ್​​ ಮಹತ್ವದ ಆದೇಶ ಹೊರಡಿಸಿದೆ.

ನಾಯಿ ಕಡಿತದಿಂದ ಕಂಗೆಟ್ಟ ಸುಮಾರು 190ಕ್ಕೂ ಹೆಚ್ಚು ಮಂದಿ ಹೈಕೋರ್ಟ್​ ಮೊರೆ ಹೋಗಿದ್ದರು. ಸದ್ಯ ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​​, ನಾಯಿ ಕಚ್ಚಿದ್ರೆ ಒಂದು ಗಾಯಕ್ಕೆ 10 ಸಾವಿರ, 2 ಗಾಯಕ್ಕೆ 20 ಸಾವಿರ ನೀಡಿ ಎಂದು ಹೇಳಿದೆ.

ಪಂಜಾಬ್​​, ಹರಿಯಾಣ, ಚಂಡೀಗಡದಲ್ಲಿ ಈ ಆದೇಶ ಪಾಲಿಸಬೇಕು. ಸಂಬಂಧಪಟ್ಟ ಸರ್ಕಾರ ಸಮಿತಿ ಒಂದು ರಚನೆ ಮಾಡಿ ಆದೇಶವನ್ನು ಅನುಷ್ಠಾನ ಮಾಡಬೇಕು ಎಂದಿದೆ. ಇನ್ನೂ, ಹೈಕೋರ್ಟ್​ ಆದೇಶದ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.lll

Related Articles

Latest Articles