Wednesday, September 11, 2024

ದಕ್ಷಿಣ ಕನ್ನಡ: ಬಸ್ಸಿನಿಂದ ಹೊರಗೆಸೆಯಲ್ಟಟ್ಟು ಸಾವನ್ನಪ್ಪಿದ ನಿರ್ವಾಹಕನ ಕುಟುಂಬಕ್ಕೆ 1 ಲಕ್ಷ ಸಹಾಯಧನ

ಮಂಗಳೂರು : ಕರಾವಳಿ ವಲಯ ಸಿಟಿ ಬಸ್ ಮಾಲಕರ ಒಕ್ಕೂಟ ಮಂಗಳೂರು ಇದರ ವತಿಯಿಂದ ಇತ್ತೀಚಿಗೆ ನಂತೂರುನಲ್ಲಿ ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟು ಮೃತಪಟ್ಟ ಬಸ್ ನಿರ್ವಾಹಕ ಗುರು ಯಾನೆ ಈರಯ್ಯ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿಯ ಚೆಕ್ಕನ್ನು ಹಸ್ತಾಂತರ ಮಾಡಲಾಯಿತು.

ದಕ್ಷಿಣ ಕನ್ನಡ ಬಸ್ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ಅಜೀಜ್ ಪರ್ತಿಪ್ಪಾಡಿ ಯವರು ಮೃತನ ಸಹೋದರಿಯ ಕೈ ಯಲ್ಲಿ ಚೆಕ್ಕನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕರಾವಳಿ ಒಕ್ಕೂಟದ ಅಧ್ಯಕ್ಷ ಅಶೋಕ್ ತಾವ್ರೋ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್ ಉಪಾಧ್ಯಕ್ಷ ರಾಮಚಂದ್ರ ನಾಯಕ್, ಯಶು ಚಂದ್ರಕಲಾ ವಿನ್ನಿ ಡಿಸೋಜ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

Related Articles

Latest Articles