ಹಾಸನ: ಹಾಸನಾಂಬೆ ದೇವಾಲಯದಲ್ಲಿ ಕರೆಂಟ್ ಶಾಕ್‌ಗೊಂಡಿದೆ ಎಂಬ ವದಂತಿಯಿಂದ ಧಿಡೀರ್ ನೂಕು ನುಗ್ಗಲಾಗಿದೆ. ಈ ವೇಳೆ ದರ್ಶನಕ್ಕೆ ಸರತಿ ಸಾಲಿನ ಬಳಿ ನಿಂತಿದ್ದ ಮಹಿಳೆಯರು ಎದ್ದು ಬಿದ್ದು ಓಡಲು ಯತ್ನಿಸಿ ಒಬ್ಬರ ಮೇಲೊಬ್ಬರು ಬಿದ್ದಿದ್ದಾಗಿ ನ್ಯೂಸ್‌ಫರ್ಸ್ಟ್ ವರದಿ ಮಾಡಿದೆ.
ಜಗತ್ ಪ್ರಸಿದ್ಧ ಹಾಸನಾಂಬೆಯನ್ನು ಕಾಣಲು ದಿನಾಲು ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಅದರಂತೆಯೆ ಇಂದು ಕೂಡ ಸಾಕಷ್ಟು ಜನರು ದೇವರನ್ನು ಕಾಣಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.
ನ್ಯೂಸ್‌ಫರ್ಸ್ಟ್ ಕನ್ನಡದಲ್ಲಿ ಪ್ರಕಟವಾದ ವರದಿ ಪ್ರಕಾರ ಸರತಿ ಸಾಲಿನಲ್ಲಿ ನಿಂತವರಿಗೆ ಕರೆಂಟ್ ಶಾಕ್ ಹೊಡೆಯುತ್ತಿದೆ ಎಂಬ ವದಂತಿ ಮಾತು ಕೇಳಿ ಜನರು ಕಾಲ್ಕಿತ್ತಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ.
ಇನ್ನು ಕಾಲ್ತುಳಿತಕ್ಕೆ ಒಳಗಾದ ಕೆಲವರನ್ನು ಸ್ಥಳೀಯರು ಹೊರಗೆಳೆದ್ದಾರೆ. ಭಕ್ತರನ್ನು ಈ ವೇಳೆ ಭಯಬೀತರಾಗಿದ್ದಲ್ಲದೆ, ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಇನ್ನು ಪ್ರಜಾವಾಣಿ ವರದಿ ಪ್ರಕಾರ, ಎಲ್‌ಇಡಿ ಸ್ಕ್ರೀನ್ ಅಳವಡಿಸಿದ್ದ ತಂತಿಯಿಂದ ಈ ಘಟನೆ ನಡೆದಿದೆ. ಬ್ಯಾರಿಕೇಡ್‌ಗಳಲ್ಲಿ ವಿದ್ಯುತ್ ಪ್ರವಹಿಸಿ ಘಟನೆ ನಡೆದಿದ್ದಾಗಿ ವರದಿ ಭಿತ್ತರಿಸಿದೆ.