ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಬಳಿಕ ಅಯೋಧ್ಯೆಯಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿರುವುದಾಗಿ ಶ್ರೀರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್.
ಪ್ರಾಣಪ್ರತಿಷ್ಠಾಪನೆಯ ಮಾರನೇ ದಿನ ಸಂಜೆ 5.50 ರ ಸುಮಾರಿಗೆ ಕೋತಿಯೊಂದು ದಕ್ಷಿಣ ದ್ವಾರದ ಮೂಲಕ ಗರ್ಭಗುಡಿಯನ್ನು ಪ್ರವೇಶಿಸಿದೆ. ಒಳಹೋಗುತ್ತಿದ್ದಂತೆ ಬಾಲರಾಮನ ಉತ್ಸವ ಮೂರ್ತಿಯ ಬಳಿ ಹೋಗಿದೆ. ಇದರಿಂದ ಆತಂಕಗೊಂಡ ಭದ್ರತಾ ಸಿಬ್ಬಂದಿಯು, ಕೋತಿಯು ವಿಗ್ರಹವನ್ನು ನೆಲಕ್ಕೆ ಬೀಳಿಸಬಹುದೆಂಬ ಭಯದಿಂದ ಮಂಗನತ್ತ ಓಡಿದ್ದಾರೆ.
ನಂತರ ಅದು ಏನು ಮಾಡದೇ ಶಾಂತವಾಗಿ ಉತ್ತರ ದ್ವಾರದಿಂದ ಹೊರನಡೆದಿದೆ. ಘಟನೆಯನ್ನು ಬಾಲರಾಮನ ದರ್ಶನಕ್ಕಾಗಿ ಭಗವಾನ್ ಹನುಮಂತನು ಬಂದಿದ್ದಾನೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.